Select Your Language

Notifications

webdunia
webdunia
webdunia
webdunia

ಜಿಯೋ ಪ್ರೈಮ್ ಮೆಂಬರ್`ಶಿಪ್ ಉಚಿತವಾಗಿ ಪಡೆಯುವುದು ಹೇಗೆ..?

ಜಿಯೋ ಪ್ರೈಮ್ ಮೆಂಬರ್`ಶಿಪ್ ಉಚಿತವಾಗಿ ಪಡೆಯುವುದು ಹೇಗೆ..?
ಬೆಂಗಲೂರು , ಶುಕ್ರವಾರ, 24 ಮಾರ್ಚ್ 2017 (11:46 IST)
ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ ರಿಲಯನ್ಸ್ ಜಿಯೋ ತನ್ನ ಉಚಿತ ಆಫರ್`ಗಳು ಮುಗಿದ ಬಳಿಕವೂ ಕೋಟಿ ಕೋಟಿ ಗ್ರಾಹಕರನ್ನ ಉಳಿಸಿಕೊಳ್ಳಲು ಹೊಸ ಹೊಸ ಆಫರ್`ಗಳನ್ನ ನೀಡುತ್ತಿದೆ. ಇದೀಗ, ಜಿಯೋ ಲೇಟೆಸ್ಟ್ ಆಫರ್ ಕ್ಯಾಶ್ ಬ್ಯಾಕ್.

ಹೌದು, ಜಿಯೋ ಮನಿ ಆಪ್ ಮೂಲಕ ಜಿಯೋ ಪ್ರೈಮ್ ಮೆಂಬರ್ ಶಿಪ್ ಪಡೆದರೆ 50 ರೂ. ಕ್ಯಾಶ್ ಬ್ಯಾಕ್ ಸಿಗಲಿದೆ. ಜಿಯೋ ಮನಿ ವಾಲೆಟ್ ಮೂಲಕ 303 ಪ್ಲಾನ್ ರೀಚಾರ್ಜ್ ಮಾಡಿದರೆ ಮತ್ತೆ ಐವತ್ತು ರೂಪಾಯಿಯ ಕ್ಯಾಶ್ ಬ್ಯಾಕ್ ಸಿಗಲಿದೆ. ಹೀಗಾಗಿ, ನೀವು ಜಿಯೋ ಪ್ರೈಮ್`ಗೆ ಪೇ ಮಾಡುವ 99 ರೂಪಾಯಿಗೆ ಬದಲಾಗಿ 100 ರೂ. ಕ್ಯಾಶ್ ಬ್ಯಾಕ್ ನಿಮಗೆ ಸಿಗಲಿದೆ. ಈ ಕ್ಯಾಶ್ ಬಾಕ್ ಅನ್ನ 2 ದಿನಗಳಲ್ಲಿ ಗ್ರಾಹಕರು ಬಳಕೆ ಮಾಡಿಕೊಳ್ಳಬೇಕಿದೆ.

ಫೆಬ್ರವರಿಯಲ್ಲೇ ರಿಲಯನ್ ಕಂಪನಿ ಜಿಯೋ ಪ್ರೈಮ್ ಯೋಜನೆಯನ್ನ ಜಾರಿಗೆ ತಂದಿದ್ದು, ಇದನ್ನ ಆಕ್ಟಿವ್ ಮಾಡಿಕೊಳ್ಳುವ ಗ್ರಾಹಕರಿಗೆ ನ್ಯೂ ಇಯರ್ ಯೋಜನೆಯ ಎಲ್ಲ ಆಪರ್`ಗಳೂ ಸಿಗಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ಹೊಸ ಉಪರಾಷ್ಟ್ರಪತಿ ಇವರಾಗ್ತಾರಾ?!