Webdunia - Bharat's app for daily news and videos

Install App

ನಿಮ್ಮ ಆಹಾರ ಸೇವನೆಯನ್ನು ನಿಯಂತ್ರಿಸುತ್ತೆ ಈ ಬ್ರೇಸ್​ ಲೈಟ್. ಹೇಗೆ ಗೊತ್ತಾ?

Webdunia
ಮಂಗಳವಾರ, 18 ಜೂನ್ 2019 (09:11 IST)
ನವದೆಹಲಿ : ಹಸಿವನ್ನು ತಣಿಸಲು ಒಮ್ಮಲೆ ಸಿಕ್ಕಾಪಟ್ಟೆ ತಿಂದುಬಿಡುತ್ತೇವೆ. ಆಮೇಲೆ ತೂಕ ಇಳಿಸಲು ಹರಸಾಹಸ ಪಡುತ್ತೇವೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಅಮೆಜಾನ್ ​​​ ಪಾವ್ಲೋಕ್​ ಬ್ರೇಸ್​ ಲೈಟ್ ಎಂಬ ಆಹಾರ ಸೇವನೆಯನ್ನು ನಿಯಂತ್ರಿಸುವ ಸಾಧನವೊಂದನ್ನು ಮಾರಾಟ ಮಾಡುತ್ತಿದೆ.




ಪಾವ್ಲೋಕ್​ ಬ್ರೇಸ್​ ಲೈಟ್ ನಲ್ಲಿ 350 ವೋಲ್ಟ್​​ ವಿದ್ಯುತ್​​ ಶಾಕ್​ ಅನ್ನು ಅಳವಡಿಸಲಾಗಿದೆ. ಇದನ್ನು ಧರಿಸಿದವರು ಮಿತಿಗಿಂತ ಹೆಚ್ಚು ಆಹಾರವನ್ನು ತಿಂದರೆ ವಿದ್ಯುತ್​ ಶಾಕ್​ ನೀಡುತ್ತದೆ. ಅಲ್ಲದೇ ನೀವು ಸೇವಿಸಿದ ಆಹಾರದ ಕ್ಯಾಲೊರಿಯನ್ನು ಪರಿಶೀಲಿಸಲು ಆ್ಯಪ್ ವೊಂದನ್ನು ಈ ಪಾವ್ಲೋಕ್​ ಬ್ರೇಸ್​ ಲೈಟ್ ಹೊಂದಿದ್ದು,  ಕ್ಯಾಲೊರಿ ಹೆಚ್ಚಾದಂತೆ ಬ್ರೇಸ್​ ಲೈಟ್​ ಎಚ್ಚರಿಕೆಯನ್ನು ನೀಡುತ್ತದೆ.


ಹಾಗೇ ಈ ಈ ಬ್ರೆಸ್​ ಲೈಟ್ ಆಹಾರಕ್ಕೆ ಮಾತ್ರ ಸೀಮಿತವಾಗಿಲ್ಲ, ಜೊತೆಗೆ ಇಂಟರ್​ನೆಟ್​, ಟಿ.ವಿ ವೀಕ್ಷಣೆ, ವಿಡಿಯೋ ಗೇಮ್ಸ್​ ಮೇಲೆಯೂ ನಿಗಾ ವಹಿಸುತ್ತದೆ. ಅತಿಯಾದ ಟಿ.ವಿ ವೀಕ್ಷಣೆ, ಇಂಟರ್ ನೆಟ್​ ಬಳಕೆ ಮಾಡಿದರೂ ಕೂಡ ಎಚ್ಚರಿಕೆ ನೀಡುತ್ತದೆ. ಅಮೆಜಾನ್​ ನಲ್ಲಿ ಲಭ್ಯವಿರುವ ಪಾವ್ಲೋಕ್​  ಬ್ರೇಸ್​ ಲೈಟ್​ ಬೆಲೆ $199(ರೂ.13900)ಗಳಾಗಿದ್ದು, ಇದು ಒಮ್ಮೆ ಚಾರ್ಜ್ ಮಾಡಿದರೆ 150 ಬಾರಿ ಎಚ್ಚರಿಕೆ ನೀಡುತ್ತದೆ.



 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments