Select Your Language

Notifications

webdunia
webdunia
webdunia
webdunia

ಜಿಎಸ್ ಟಿ ಕುರಿತು ಗೊಂದಲವೇ; ಯಾವುದರ ಬೆಲೆ ಎಷ್ಟು ಎಂಬ ಕನ್ ಪ್ಯೂಸನ್ನೇ; ಹಾಗಾದ್ರೆ ಈ ಆ್ಯಪ್ ಗೆ ಹೋಗಿ

ಜಿಎಸ್ ಟಿ ಕುರಿತು ಗೊಂದಲವೇ; ಯಾವುದರ ಬೆಲೆ ಎಷ್ಟು ಎಂಬ ಕನ್ ಪ್ಯೂಸನ್ನೇ; ಹಾಗಾದ್ರೆ ಈ ಆ್ಯಪ್ ಗೆ ಹೋಗಿ
ನವದೆಹಲಿ , ಭಾನುವಾರ, 9 ಜುಲೈ 2017 (14:06 IST)
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಜಿಎಸ್ ಟಿ ಕುರಿತಂತೆ ಗೊಂದಲಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಮುಂದಾಗಿದ್ದು, ಜಿಎಸ್ ಟಿ ದರ ತೋರಿಸುವ ಜಿಎಸ್ ಟಿ ಆ್ಯಪ್  ಬಿಡುಗಡೆ ಮಾಡಿದೆ.
 
ಜಿಎಸ್ ಟಿಯಿಂದ ಸಾಮಗ್ರಿಗಳಲ್ಲಿ ಆದ ದರಗಳ ಬದಲಾವಣೆಯಲ್ಲಿನ ಗೊಂದಲಗಳನ್ನು ನಿವಾರಿಸಲು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ದೆಹಲಿಯಲ್ಲಿ ಮೊಬೈಲ್ ಆ್ಯಪ್ ನ್ನು ಬಿಡುಗಡೆಗೊಳಿಸಿದರು. ಇದರಿಂದ ಬೆರಳ ತುದಿಯಲ್ಲೇ ಜಿಎಸ್​​ಟಿ ಬಗೆಗಿನ ಪ್ರಶ್ನೆಗಳಿಗೆ ಉತ್ತರ  ಹುಡುಕಿ ಕೊಳ್ಳಬಹುದಾಗಿದೆ.
 
ಈ ಆ್ಯಪ್ ನ ವಿಶೇಷತೆ ಎಂದರೆ ಒಂದು ಬಾರಿ ಡೌನ್​ಲೋಡ್​ಮಾಡಿದ ಬಳಿಕ ಈ ಆ್ಯಪ್ ಅನ್ನು ಆಫ್​ಲೈನ್​ಇದ್ದರೂ ಕೂಡಾ ಬಳಸಬಹುದಾಗಿದ್ದು, ಗೂಗಲ್​ಪ್ಲೇ ಸ್ಟೋರ್​ನಲ್ಲಿ ಈ ಆ್ಯಪ್ ಸಿಗಲಿದೆ.
GST rate finder ಎಂಬ ಹೆಸರನ್ನೇ ಹೊಂದಿರುವ ಈ ಅಪ್ಲಿಕೇಶನ್ ನಿಂದಾಗಿ ಜನರಿಗೆ ತಾವುಕೊಳ್ಳಲಿರುವ ಸರಕು ಅಥವಾ ಸಾಮಗ್ರಿಗಳ ಬೆಲೆಯ ಹಿಂದಿನ ಹಾಗೂ ಈಗಿರುವ ಬೆಲೆಯ ವ್ಯತ್ಯಾಸಗಳನ್ನು ತಿಳಿಯಲು ಅನುಕೂಲವಾಗಲಿದೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಕೋಮು ಗಲಭೆಗೆ ಪ್ರಚೋದನೆ ನೀಡುವ ಫೇಕ್ ಇಮೇಜ್ ಶೇರ್: ಬಿಜೆಪಿ ಬೆಂಬಲಿಗ ಅರೆಸ್ಟ್