Select Your Language

Notifications

webdunia
webdunia
webdunia
webdunia

ಡೆಬಿಟ್ ಅಂಡ್ ಕ್ರೆಡಿಟ್ ಕಾರ್ಡ್ ಬಳಕೆದಾರಿಗೆ ಶುಭವಾರ್ತೆ

ಡೆಬಿಟ್ ಅಂಡ್ ಕ್ರೆಡಿಟ್ ಕಾರ್ಡ್ ಬಳಕೆದಾರಿಗೆ ಶುಭವಾರ್ತೆ
New Delhi , ಗುರುವಾರ, 8 ಡಿಸೆಂಬರ್ 2016 (14:13 IST)
ನಗದು ರಹಿತ ವ್ಯವಹಾರಕ್ಕಾಗಿ ಕೇಂದ್ರ ಸರಕಾರ ಬಿರಬಿರನೇ ಹೆಜ್ಜೆಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಪ್ರೋತ್ಸಾಹ ತುಂಬಲು ನಿರ್ಧಾರ ತೆಗೆದುಕೊಂಡಿದೆ. 2,000ದ ಒಳಗಿನ ವ್ಯವಹಾರಕ್ಕೆ ಸರ್ವೀಸ್ ತೆರಿಗೆಯನ್ನು ರದ್ದುಪಡಿಸಿದೆ.
 
ಕ್ರೆಡಿಟ್, ಡೆಬಿಟ್ ಕಾರ್ಡ್ ಅಥವಾ ಬೇರೆ ಕಾರ್ಡ್ ಸೇವೆಗಳಲ್ಲಿ ಈ ಸದುಪಾಯ ಕೊಡಲಾಗಿದೆ. ಜೂನ್ 2012ರ ಸೇವಾ ತೆರಿಗೆ ನೋಟಿಫಿಕೇಷನಲ್ಲಿ ಬದಲಾವಣೆ ತರಲಿದೆ ಕೇಂದ್ರ ಸರಕಾರ. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ನೋಟಿಫಿಕೇಶನ್ ಮಂಡಿಸುವುದಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
 
ನಗದು ವ್ಯವಹಾರಗಳಲ್ಲಿ ತೊಂದರೆ ಅನುಭವಿಸುತ್ತಾ, ಡಿಜಿಟಲ್ ಸೇವೆಗಳನ್ನು ಬಳಸುತ್ತಿರುವವರಿಗೆ ಇದರಿಂದ ತುಂಬಾ ಪ್ರಯೋಜನವಾಗಲಿದೆ. ಮುಂಬೈನಲ್ಲಿ ಸಭೆ ಸೇರಿದ್ದ ಮಾನಿಟರಿ ಪಾಲಸಿ ಸಮಿತಿ ನೇತೃತ್ವದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. 
 
ಇದೇ ಸಂದರ್ಭದಲ್ಲಿ ಹೊಸ 500 ರೂ ನೋಟು ಬರಲು ಇನ್ನೊಂದಿಷ್ಟು ಸಮಯ ಬೇಕಾಗುತ್ತದೆ ಎಂದು ಆರ್‌ಬಿಐ ತಿಳಿಸಿದೆ. ಇನ್ನು ಮುಂದೆ ರೂ.2000 ರೂಪಾಯಿ ಪೇಮೆಂಟ್‌ಗಳಿಗೆ ಯಾವುದೇ ರೀತಿಯ ಓಟಿಪಿ (ಒನ್ ಟೈಮ್ ಪಾಸ್‍ವರ್ಡ್) ಬೇಕಾಗಿಲ್ಲ ಎಂದಿದೆ ಆರ್‌ಬಿಐ. ಒನ್ ಟೈಮ್ ರಿಜಿಸ್ಟ್ರೇಶನ್ ಮೂಲಕ ಕಾರ್ಡುದಾರರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದಿದೆ. 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಜಮ್ಮು ಕಾಶ್ಮಿರ: 10 ಲಕ್ಷ ಹಣ ದೋಚಿ ಭಯೋತ್ಪಾದಕರು ಎಸ್ಕೇಪ್