ಬೆಂಗಳೂರು: ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆ ಏರಿಕೆಯಾಗುತ್ತಲೇ ಇದೆ. ಆದರೆ ಇಂದಂತೂ ಚಿನ್ನದ ಬೆಲೆ ಮಿತಿ ಮೀರುವಷ್ಟು ಏರಿಕೆಯಾಗಿದೆ. ಸದ್ಯಕ್ಕಂತೂ ಚಿನ್ನ ಕೊಳ್ಳುವ ಕನಸು ನನಸು ಮಾಡುವುದು ಅಸಾಧ್ಯ ಎನ್ನುವಂತಿದೆ. ಇಂದು ಪರಿಶುದ್ಧ ಚಿನ್ನದ ದರ ಎಷ್ಟು ಏರಿಕೆಯಾಗಿದೆ ಎಂಬ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು.ಇಂದು ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದೆ. ಕಳೆದ ಎರಡುದಿನಗಳಿಂದಲೂ ಚಿನ್ನದ ಬೆಲೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇತ್ತು. ಆದರೆ ಇಂದಂತೂ ಗಗನ ಕುಸುಮವಾಗಿದೆ. ಎಲ್ಲಾ ದಾಖಲೆಗಳನ್ನೂ ಮೀರಿ ಏರಿಕೆಯಾಗಿದೆ. ನಿನ್ನೆ ಪರಿಶುದ್ಧ ಚಿನ್ನದ ಬೆಲೆ 92,795 ರೂ.ಗಳಾಗಿತ್ತು. ಇಂದು ಏಕಾಏಕಿ 4 ಸಾವಿರ ರೂ. ಏರಿಕೆಯಾಗಿದ್ದು, 96, 610 ರೂ.ಗೆ ಬಂದು ನಿಂತಿದೆ. ಇದು ಇತ್ತೀಚೆಗಿನ ದಿನಗಳಲ್ಲೇ ದಾಖಲೆಯಾಗಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಸ್ವಲ್ಪ ಮಟ್ಟಿಗೆ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂಗೆ 25 ರೂ. ಏರಿಕೆಯಾಗಿದ್ದು 8,770 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ 27 ರೂ. ಏರಿಕೆಯಾಗಿದ್ದು ಇಂದು 9,567 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 21 ರೂ. ಏರಿಕೆಯಾಗಿದ್ದು ಇಂದು ಗ್ರಾಂಗೆ 7,176 ರೂ. ರಷ್ಟಾಗಿದೆ.
ಬೆಳ್ಳಿ ದರ
ಬೆಳ್ಳಿ ದರವೂ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ಇಂದು ಮತ್ತೆ ಭಾರೀ ಏರಿಕೆಯಾಗಿದೆ. ಇಂದು ಬೆಳ್ಳಿ ದರ ಪ್ರತೀ ಕೆ.ಜಿ.ಗೆ 2,900 ರೂಗಳಷ್ಟು ಏರಿಕೆಯಾಗಿದ್ದು ಪ್ರತೀ ಕೆ.ಜಿ.ಗೆ 1,00,000 ರೂ.ಗೆ ಬಂದು ನಿಂತಿದೆ. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು.