Webdunia - Bharat's app for daily news and videos

Install App

Gold Price today: ಸರ್ವಕಾಲಿಕ ದಾಖಲೆ ಬರೆದ ಚಿನ್ನದ ಬೆಲೆ, ಇಂದು ಎಷ್ಟಾಗಿದೆ ನೋಡಿ

Krishnaveni K
ಬುಧವಾರ, 23 ಏಪ್ರಿಲ್ 2025 (09:25 IST)
ಬೆಂಗಳೂರು: ಇಷ್ಟು ದಿನ ಮಧ್ಯಮ ವರ್ಗದವರು ಚಿನ್ನದ ಬೆಲೆ ಇಷ್ಟಾದರೆ ಗತಿಯೇನೋ ಎಂದು ಭಯಗೊಂಡಿದ್ದರು. ಅದೀಗ ನಿಜವಾಗಿದೆ. ಇಂದು ಪರಿಶುದ್ಧ ಚಿನ್ನದ ಬೆಲೆ ಲಕ್ಷದ ಗಡಿ ದಾಟಿದೆ. ಇಂದು ಪರಿಶುದ್ಧ ಚಿನ್ನದ ದರ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
99.9 ಶುದ್ಧತೆಯ ಚಿನ್ನದ ಬೆಲೆ ಭಾರೀ ಏರಿಕೆ ಕಾಣುತ್ತಲೇ ಇತ್ತು. ನಿನ್ನೆ ಪರಿಶುದ್ಧ ಚಿನ್ನದ ಬೆಲೆ 99,860 ರೂ.ಗೆ ಬಂದು ತಲುಪಿತ್ತು. ಮೊನ್ನೆಯಿಂದ ಚಿನ್ನದ ಬೆಲೆ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು. ಆದರೆ ಇಂದಂತೂ ಇದುವರೆಗೆ ಕಾಣದಷ್ಟು ಏರಿಕೆಯಾಗಿದೆ. ಇಂದು ಚಿನ್ನದ ದರ ಲಕ್ಷದ ಗಡಿ ದಾಟಿದ್ದು ಪರಿಶುದ್ಧ ಚಿನ್ನದ ಬೆಲೆ ಬರೋಬ್ಬರಿ 1,01,890 ರೂ.ಗಳಷ್ಟಾಗಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಸಣ್ಣಮಟ್ಟಿಗೆ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಪ್ರತೀ ಗ್ರಾಂಗೆ 1 ರೂ.ಗಳಷ್ಟು ಏರಿಕೆಯಾಗಿದ್ದು 9,291 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 1 ರೂ. ಹೆಚ್ಚಾಗಿದ್ದು 10,136 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 1 ರೂ. ಏರಿಕೆಯಾಗಿದ್ದು 7,602 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರವೂ ನಿರಂತರವಾಗಿ ಏರಿಕೆಯಾಗುತ್ತಲೇ ಇತ್ತು.  ಇಂದು ಮತ್ತೆ ಬೆಳ್ಳಿ ಬೆಲೆ ಏರಿಕೆಯಾಗಿದೆ. ಇಂದು ಬೆಳ್ಳಿ ದರ ಪ್ರತಿ ಕೆ.ಜಿ.ಗೆ 100 ರೂ.ಗಳಷ್ಟು ಏರಿಕೆಯಾಗಿದ್ದು ಪ್ರತೀ ಕೆ.ಜಿ. ಬೆಳ್ಳಿ ಬೆಲೆ ಇಂದು 1,01,200 ರೂ.ಗಳಾಗಿವೆ. ಕಳೆದ ಎರಡು ತಿಂಗಳಿನಿಂದ ಬೆಳ್ಳಿ ಬೆಲೆಯಲ್ಲೂ ದಿನೇ ದಿನೇ ಏರಿಕೆಯಾಗುತ್ತಲೇ ಇತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಕಿರುಕುಳ: ಸಕಲೇಶಪುರ ವ್ಯಕ್ತಿ ಅರೆಸ್ಟ್‌

ರೈತರ ಹೆಸರಿನಲ್ಲಿ ರಾಜಕೀಯ ಮಾಡುವ ವಿಜಯೇಂದ್ರ ಮೋದಿ ಮನೆ ಮುಂದೆ ಪ್ರತಿಭಟಿಸಲಿ: ಶಿವರಾಜ ತಂಗಡಗಿ

ಕಲಾಸಿಪಾಳ್ಯ ಬಿಎಂಟಿಸಿ ಬಸ್ ಸ್ಟ್ಯಾಂಡ್‌ನಲ್ಲಿ ಸ್ಪೋಟಕ ಪತ್ತೆ ಕೇಸ್: ಮೂವರು ಅರೆಸ್ಟ್

ಕೊಲ್ಲಲ್ಪಟ್ಟ ಉಗ್ರರು ಪಾಕ್‌ನವರು ಎಂಬುದಕ್ಕೆ ಪ್ರಮುಖ ಸಾಕ್ಷಿ ಕೊಟ್ಟ ಅಮಿತ್ ಶಾ

ಧರ್ಮಸ್ಥಳ: ಶ್ವಾನ ಪಡೆ ಎಂಟ್ರಿ ಕೊಟ್ಟ ಬೆನ್ನಲ್ಲೇ ಒಂದನೇ ಪಾಯಿಂಟ್ಸ್‌ನ ಹುಡುಕಾಟದಲ್ಲಿ ಮಹತ್ವದ ಬದಲಾವಣೆ

ಮುಂದಿನ ಸುದ್ದಿ
Show comments