Publish Date: Tue, 28 Jul 2026 (13:13 IST)
Updated Date: Tue, 28 Jul 2026 (13:15 IST)
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಚಿನ್ನದ ದರ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಕಳೆದ ಕೆಲವು ದಿನಗಳಿಂದ ಚಿನ್ನದ ದರ ಇಳಿಕೆಯಾಗುತ್ತಲೇ ಇತ್ತು. ಆದರೆ ಇಂದು ಮತ್ತೆ ಚಿನ್ನದ ದರದಲ್ಲಿ ವ್ಯತ್ಯಾಸ ಕಂಡುಬಂದಿದೆ. ಪರಿಶುದ್ಧ ಚಿನ್ನದ ದರಲ್ಲಿ ಮೊನ್ನೆ ಕೊಂಚ ಏರಿಕೆಯಾಗಿತ್ತು. ಇಂದು ಚಿನ್ನದ ದರ ಮತ್ತೆ ಇಳಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತಗಳು ಭಾರತದಲ್ಲೂ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುತ್ತಲೇ ಇರುತ್ತವೆ. ಇಂದು ಪರಿಶುದ್ಧ ಚಿನ್ನದ ದರ ಇಳಿಕೆಯಾಗಿದ್ದು 1,47,150 ರೂ.ಗಳಾಗಿವೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಗಳು ಇಂದು ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 172 ರೂ ಇಳಿಕೆಯಾಗಿದ್ದು 14,417 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 155 ರೂ ಇಳಿಕೆಯಾಗಿದ್ದು 13,215 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಪ್ರತೀ ಗ್ರಾಂ.ಗೆ 125 ರೂ ಇಳಿಕೆಯಾಗಿದ್ದು 10,813 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರ ಏರಿಕೆ-ಇಳಿಕೆಯಾಗುತ್ತಲೇ ಇದೆ. ಇಂದು ಬೆಳ್ಳಿ ದರ ಇಂದು 5,000 ಇಳಿಕೆಯಾಗಿದೆ. ಇಂದು ಪ್ರತೀ ಕೆ.ಜಿಗೆ ಬೆಳ್ಳಿ ದರ 2,35,000 ರೂ. ಗಳಷ್ಟಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ