Publish Date: Tue, 31 Mar 2026 (12:12 IST)
Updated Date: Tue, 31 Mar 2026 (12:13 IST)
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ವಾರಂತ್ಯಕ್ಕೆ ಪರಿಶುದ್ಧ ಚಿನ್ನದ ದರದಲ್ಲಿ ಕೊಂಚ ಏರಿಕೆಯಾಗಿತ್ತು. ಪರಿಶುದ್ಧ ಚಿನ್ನದ ದರ ನಿನ್ನೆ 1,50,575.00 ರೂ.ಗಳಿತ್ತು. ಆದರೆ ಇಂದು ಏರಿಕೆಯಾಗಿದ್ದು 1,52,835.00 ರೂ.ಗಳಷ್ಟಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಗಳು ಇಂದು ಏರಿಕಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 103 ರೂ. ಏರಿಕೆಯಾಗಿದ್ದು 14,929 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 95 ರೂ. ಏರಿಕೆಯಾಗಿದ್ದು 13,685 ರೂ.ಗಳಾಗಿವೆ. 12 ಕ್ಯಾರೆಟ್ ಚಿನ್ನದ ಬೆಲೆ ಇಂದು ಪ್ರತೀ ಗ್ರಾಂ.ಗೆ 78 ರೂ. ಏರಿಕೆಯಾಗಿದ್ದು 11,197 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರ ಏರಿಕೆ-ಇಳಿಕೆಯಾಗುತ್ತಲೇ ಇದೆ. ಇಂದು ಬೆಳ್ಳಿ ದರ ಇಂದು 5,000 ರೂ. ಏರಿಕೆಯಾಗಿದೆ. ಇಂದು ಪ್ರತೀ ಕೆ.ಜಿಗೆ ಬೆಳ್ಳಿ ದರ 2,50,000 ರೂ. ಗಳಷ್ಟಿದೆ.