Publish Date: Sat, 28 Feb 2026 (11:50 IST)
Updated Date: Sat, 28 Feb 2026 (11:56 IST)
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಚಿನ್ನದ ದರ ಏರಿಕೆ, ಇಳಿಕೆಯಾಗುತ್ತಲೇ ಇದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತುಇತರೆ ಚಿನ್ನದ ದರ ಭಾರೀ ಏರಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಕಳೆದ ವಾರ ಪರಿಶುದ್ಧ ಚಿನ್ನದ ದರ ಸತತವಾಗಿ ಬೆಲೆ ಏರಿಳಿಕೆಯಾಗುತ್ತಲೇ ಇತ್ತು. ಆದರೆ ಇಂದು ಪರಿಶುದ್ಧ ಚಿನ್ನದ ದರ ಭಾರೀ ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 1,62,835.00 ರೂ.ಗಳಿತ್ತು. ಇಂದೂ 1,64,395.00 ರೂ.ಗಳಷ್ಟಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಗಳು ಇಂದು ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 316 ರೂ. ಏರಿಕೆಯಾಗಿದ್ದು 16,473 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 290 ರೂ. ಏರಿಕೆಯಾಗಿದ್ದು 15,100 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಪ್ರತೀ ಗ್ರಾಂ.ಗೆ 237 ರೂ. ಏರಿಕೆಯಾಗಿದ್ದು 12,355 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರ ಏರಿಕೆ-ಇಳಿಕೆಯಾಗುತ್ತಲೇ ಇದೆ. ಇಂದು ಬೆಳ್ಳಿ ದರ ಇಂದು 10,000 ರೂ. ಏರಿಕೆಯಾಗಿದೆ. ಇಂದು ಪ್ರತೀ ಕೆ.ಜಿಗೆ ಬೆಳ್ಳಿ ದರ 2,95,000 ರೂ. ಗಳಷ್ಟಿದೆ.