Publish Date: Wed, 21 Jan 2026 (12:43 IST)
Updated Date: Wed, 21 Jan 2026 (12:44 IST)
ಬೆಂಗಳೂರು: ಚಿನ್ನದ ಬೆಲೆ ಮತ್ತೆ ಏರಿಕೆ ಮತ್ತು ಇಳಿಕೆಯಾಗುತ್ತಲೇ ಇದೆ. ಆದರೆ ಇಂದು ವಾರದ ಆರಂಭದಲ್ಲೇ ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ಏರಿಕೆ ಕಂಡಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಕಳೆದ ವಾರ ಪರಿಶುದ್ಧ ಚಿನ್ನದ ದರ ಸತತ ಏರಿಕೆ ಮತ್ತು ಇಳಿಕೆ ಕಂಡಿತ್ತು. ಆದರೆ ಈ ವಾರದ ಆರಂಭದಲ್ಲೇ ಚಿನ್ನದ ದರ ಏರಿಕೆಯಾಗಿತ್ತು. ಇಂದು ಪರಿಶುದ್ಧ ಚಿನ್ನದ ದರ ಭಾರೀ ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ಮೊನ್ನೆ 1,48,770.00 ರೂ.ಗಳಿತ್ತು. ಇಂದು 1,52,585.00 ರೂ.ಗಳಷ್ಟಾಗಿದೆ.
22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಗಳು ಇಂದು ಭಾರೀ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 748 ರೂ.ಗಳಷ್ಟು ಏರಿಕೆಯಾಗಿದ್ದು 15,726 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ ದರ 685 ರೂ.ಗಳಷ್ಟು ಏರಿಕೆಯಾಗಿದ್ದು 14,415 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಪ್ರತೀ ಗ್ರಾಂ.ಗೆ 560 ರೂ. ಗಳಷ್ಟು ಏರಿಕೆಯಾಗಿದ್ದು 11,794 ರೂ.ಗಳಷ್ಟಿದೆ.
ಬೆಳ್ಳಿ ದರ
ಬೆಳ್ಳಿ ದರ ಏರಿಕೆ-ಇಳಿಕೆಯಾಗುತ್ತಲೇ ಇದೆ. ಇಂದು ಬೆಳ್ಳಿ ದರ ಇಂದು 15000 ರೂ.ಗಳಷ್ಟು ಏರಿಕೆಯಾಗಿದೆ. ಪ್ರತೀ ಕೆ.ಜಿಗೆ ಬೆಳ್ಳಿ ದರ 3,30,000 ರೂ. ಗಳಷ್ಟಿದೆ.