ಬೆಂಗಳೂರು: ಚಿನ್ನ ಖರೀದಿದಾರರಿಗೆ ಇಂದು ಮತ್ತೆ ಏರಿಕೆ-ಇಳಿಕೆಯ ಸಿಹಿ-ಕಹಿ. ಇಂದು ಪರಿಶುದ್ಧ ಚಿನ್ನದ ದರ ಏರಿಕೆಯಾಗಿದ್ದರೆ ಇತರೆ ಚಿನ್ನದ ಬೆಲೆ ಇಳಿಕೆಯಾಗಿದೆ. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.
ಚಿನ್ನದ ದರ ಏರಿಕೆ
ಕಳೆದ ವಾರ ಚಿನ್ನದ ದರ ಭಾರೀ ಏರಿಕೆ ಕಂಡಿತ್ತು. ಬಳಿಕ ಇಳಿಕೆಯೂ ಆಗುತ್ತಿತ್ತು. ಆದರೆ ಈ ವಾರ ಒಮ್ಮೆ ಏರಿಕೆಯಾದರೆ ಮತ್ತೆ ಇಳಿಕೆಯಾಗುತ್ತಿದೆ. ಏರಿಕೆ-ಇಳಿಕೆ ನಡುವಿನ ಕಣ್ಣಾಮುಚ್ಚಾಲೆ ಇಂದೂ ಮುಂದುವರಿದಿದೆ. ಇಂದು ಮತ್ತೆ ಪರಿಶುದ್ಧ ಚಿನ್ನದ ದರ ಏರಿಕೆಯಾಗಿದೆ. ಪರಿಶುದ್ಧ ಚಿನ್ನದ ದರ ನಿನ್ನೆ 99,855.00 ರೂ.ಗಳಷ್ಟಿತ್ತು. ಆದರೆ ಇಂದು ಮತ್ತೆ ಏರಿಕೆ ಕಂಡಿದ್ದು, 1,00,035.00 ರೂ.ಗಳಾಗಿದೆ.
ಆದರೆ 22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಇಂದು ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 66 ರೂ.ಗಳಷ್ಟು ಇಳಿಕೆಯಾಗಿದ್ದು 09,818 ರೂ.ಗಳಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 60 ರೂ.ಗಳಷ್ಟು ಇಳಿಕೆಯಾಗಿದ್ದು 9,000 ರೂ.ಗಳಾಗಿವೆ. 18 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂ.ಗೆ 49 ರೂ.ಗಳಷ್ಟು ಇಳಿಕೆಯಾಗಿದ್ದು 7,364 ರೂ.ಗಳಷ್ಟಿದೆ.
ಬೆಳ್ಳಿ ದರ
ಕಳೆದ ವಾರದ ಆರಂಭದಲ್ಲಿ ಬೆಳ್ಳಿ ದರ ಕಳೆದ ಕೆಲವು ದಿನಗಳಿಂದ ಏರಿಕೆಯೂ ಇಲ್ಲ ಇಳಿಕೆಯೂ ಆಗಿಲ್ಲ. ಆದರೆ ವಾರಂತ್ಯದಲ್ಲಿ ಕೊಂಚ ಇಳಿಕೆಯಾಗಿತ್ತು. ಇಂದೂ ಬೆಳ್ಳಿ ದರ ಯಥಾಸ್ಥಿತಿಯಲ್ಲಿದೆ. ಇಂದು ಬೆಳ್ಳಿ ದರ ಪ್ರತೀ ಕೆ.ಜಿ.ಗೆ 1,10, 000 ರೂ. ಗಳಾಗಿದೆ.