Webdunia - Bharat's app for daily news and videos

Install App

Gold Price today: ಲಕ್ಷ ಗಡಿ ದಾಟಿದ್ದ ಚಿನ್ನ ಇಂದು ಮತ್ತಷ್ಟು ಏರಿಕೆ

Krishnaveni K
ಗುರುವಾರ, 8 ಮೇ 2025 (11:13 IST)
ಬೆಂಗಳೂರು: ಲಕ್ಷದ ಗಡಿ ದಾಟಿದ್ದ ಪರಿಶುದ್ಧ ಚಿನ್ನದ ಬೆಲೆ ಇಂದು ಮತ್ತಷ್ಟು ಏರಿಕೆಯಾಗಿ ಗ್ರಾಹಕರಿಗೆ ಶಾಕ್ ನೀಡುವಂತಿದೆ. ಪರಿಶುದ್ಧ ಚಿನ್ನದ ಬೆಲೆ ನಿನ್ನೆಯೇ ಲಕ್ಷದ ಗಡಿ ದಾಟಿತ್ತು. ಇಂದು ಪರಿಶುದ್ಧ ಚಿನ್ನದ ದರ ಮತ್ತು ಇತರೆ ಚಿನ್ನದ ದರ ವಿವರ ಇಲ್ಲಿದೆ ನೋಡಿ.

ಚಿನ್ನದ ದರ ಏರಿಕೆ
ಕಳೆದ ವಾರ ಒಮ್ಮೆ ಲಕ್ಷ ದಾಟಿದ್ದ ಪರಿಶುದ್ಧ ಚಿನ್ನದ ನಿನ್ನೆಯಿಂದ ಮತ್ತೊಮ್ಮೆ ಏರಿಕೆಯಾಗಿದೆ. ಇಂದೂ ಕೂಡಾ ಚಿನ್ನದ ದರ ಏರುಗತಿಯಲ್ಲಿದೆಯಷ್ಟೇ ಹೊರತು ಇಳಿಕೆಯಾಗಿಲ್ಲ. ಚಿನ್ನದ ಬೆಲೆ ಇಳಿಕೆಯಾಗಬಹುದು ಎಂದು ನಿರೀಕ್ಷಿಸಿದ್ದ ಗ್ರಾಹಕರಿಗೆ ಇಂದಿನ ಬೆಲೆ ಶಾಕ್ ಆಗುವಂತಿದೆ. ಇಂದು ಚಿನ್ನದ ದರ ಏರಿಕೆಯಾಗಿದ್ದು 1,00,730.00 ರೂ.ಗೆ ಬಂದು ನಿಂತಿದೆ.

22 ಮತ್ತು 24, 18 ಕ್ಯಾರೆಟ್ ಚಿನ್ನದ ಬೆಲೆಯಲ್ಲೂ ಏರಿಕೆಯಾಗಿದೆ. ಇಂದು 22 ಕ್ಯಾರೆಟ್ ಚಿನ್ನದ ಬೆಲೆ ಪ್ರತೀ ಗ್ರಾಂಗೆ 55 ರೂ. ಏರಿಕೆಯಾಗಿದ್ದು 9,130 ರೂ. ರಷ್ಟಿದೆ. 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಇಂದು ಪ್ರತೀ ಗ್ರಾಂಗೆ 60 ರೂ. ಏರಿಕೆಯಾಗಿದ್ದು 9,960 ರೂ. ಗಳಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಇಂದು ಗ್ರಾಂಗೆ 45 ಏರಿಕೆಯಾಗಿದ್ದು 7,470 ರೂ. ರಷ್ಟಾಗಿದೆ.

ಬೆಳ್ಳಿ ದರ
ಬೆಳ್ಳಿ ದರವೂ ದರ ಮೊನ್ನೆಯಿಂದ ಇಳಿಕೆಯತ್ತ ಸಾಗಿತ್ತು.  ಆದರೆ ಇಂದು ಬೆಳ್ಳಿ ದರ ಭಾರೀ ಏರಿಕೆಯಾಗಿದೆ. ಇಂದು ಪ್ರತೀ ಕೆ.ಜಿ. ಬೆಳ್ಳಿ ಬೆಲೆ ಮತ್ತಷ್ಟು ಏರಿಕೆಯಾಗಿದ್ದು ಇಂದು 1,11,000 ರೂ.ಗಳಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪಾರ್ಟಿ ವೇಳೆ ಬಹುಮಹಡಿ ಕಟ್ಟಡ ಕುಸಿತ: ಅವಶೇಷಗಳ ಅಡಿಯಲ್ಲಿ 15ರಿಂದ 20 ಮಂದಿ ಸಿಲುಕಿರುವ ಶಂಕೆ

ರಾಜಣ್ಣ ಹೇಳಿಕೆ ಮಾತ್ರವಲ್ಲ ಡಿಕೆಶಿ ಆರ್‌ಎಸ್‌ಎಸ್‌ ಗೀತೆಯೂ ಹೈಕಮಾಂಡ್‌ ತಲುಪಲಿ ಎಂದ ಜಾರಕಿಹೊಳಿ

ತಾರಕಕ್ಕೇರಿದ ಸುಂಕ ಸಮರ: ದೊಡ್ಡಣ್ಣ ನಾಲ್ಕು ಬಾರಿ ಕರೆಮಾಡಿದರೂ ಕ್ಯಾರೇ ಎನ್ನದ ನರೇಂದ್ರ ಮೋದಿ

ಚಾಮುಂಡಿ ಬೆಟ್ಟಕ್ಕೆ ಜಾತ್ಯತೀತ ಪಟ್ಟಿ ಬೇಡ: ಡಿಕೆಶಿಗೆ ಸಂಸದ ಯದುವೀರ್ ಒಡೆಯರ್‌ ಕೌಂಟರ್‌

ಜಮ್ಮುವಿನಲ್ಲಿ ರಣಭೀಕರ ಮಳೆ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, 30 ಮಂದಿ ಸಾವು

ಮುಂದಿನ ಸುದ್ದಿ
Show comments