ಆನ್‌ಲೈನ್ ಹೋಟೆಲ್ ಮತ್ತು ವಿಮಾನಯಾನ ಬುಕ್ಕಿಂಗ್ ಸೇವೆ ನೀಡುವಲ್ಲಿ ಮುಂಚೂಣಿಯಲ್ಲಿರುವ ದೈತ್ಯ ಗೋಐಬಿಬೊ ಸಂಸ್ಥೆ, ಪ್ರಯಾಣ ಆಧಾರಿತ ಗೋ "ಕಾಂಟ್ಯಾಕ್ಟ್'' ಹೆಸರಿನ ಸಾಮಾಜಿಕ ನೆಟ್‌ವರ್ಕ್ ಅಪ್ಲಿಕೇಶನ್‌ನ್ನು ಅನಾವರಣಗೊಳಿಸಿದೆ.'ಬಳಕೆದಾರರು ಆ್ಯಪ್ ಬಳಸಿ ತಮ್ಮ ಪ್ರವಾಸದ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
ಪ್ರಯಾಣ ಆಧಾರಿತ ಗೋಕಾಂಟ್ಯಾಕ್ಟ್ ಹೆಸರಿನ ಸಾಮಾಜಿಕ ನೆಟ್‌ವರ್ಕ್ ಅಪ್ಲಿಕೇಶನ್ ಬಿಡುಗಡೆ ಮಾಡುವ ಮೂಲಕ ಗೋಯ್‌ಬಿಬೊ ಸಂಸ್ಥೆ ಮತಷ್ಟು ಬಲಶಾಲಿಯಾಗಿದೆ. ಗೋಐಬಿಬೊ ಜೊತೆಯಲ್ಲಿ ಸಂಪರ್ಕ ಹೊಂದಿರುವ 3.4 ಮಿಲಿಯನ್ ಬಳಕೆದಾರರ ಸಹಕಾರದಿಂದ ಭಾರತದಲ್ಲಿ ಅತೀ ದೊಡ್ಡ ಪ್ರಯಾಣಿಕ ಸಮುದಾಯವನ್ನು ಸ್ಥಾಪಿಸುತ್ತೇವೆ ಎಂದು ಗೋಐಬಿಬೊ ಸಂಸ್ಥೆಯ ಸಂಸ್ಥಾಪಕ ಆಶಿಶ್ ಕಶ್ಯಪ್ ತಿಳಿಸಿದ್ದಾರೆ.
ಗೋಕಾಂಟ್ಯಾಕ್ಟ್ಸ್ ಅಪ್ಲಿಕೇಶನ್ ಬಳಸಿಕೊಂಡು ಗೋಐಬಿಬೊ ಟ್ರಾವೆಲ್ಸ್‌ನ್ನು ಬುಕ್ ಮಾಡುವ ಗ್ರಾಹಕರಿಗೆ ಗೋ-ಕ್ಯಾಶ್ ಜೊತೆಗೆ ಬೋನಸ್ ದೊರೆಯಲಿದೆ ಎಂದು ಸಂಸ್ಥೆ ತಿಳಿಸಿದೆ.
ಪ್ರತಿ ಬಾರಿ ಗ್ರಾಹಕ ಗೋಐಬಿಬೋ ಸಂಪರ್ಕಿಸಿದಾಗ ಗೋಕ್ಯಾಶ್ ಪ್ಲಸ್ ಬೋನಸ್ ಆಫರ್ ಪಡೆಯುತ್ತಾನೆ ಎಂದು ಆಶಿಶ್ ಕಶ್ಯಪ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.