Select Your Language

Notifications

webdunia
webdunia
webdunia
webdunia

ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಮಾರಾಟ...ಭಾರಿ ರಿಯಾಯಿತಿ

ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಮಾರಾಟ...ಭಾರಿ ರಿಯಾಯಿತಿ
New Delhi , ಮಂಗಳವಾರ, 24 ಜನವರಿ 2017 (09:35 IST)
ಇ-ಕಾಮರ್ಸ್ ದಿಗ್ಗಜ ಫ್ಲಿಪ್‌ಕಾರ್ಟ್ ಮತ್ತೊಮ್ಮೆ ಭಾರಿ ರಿಯಾಯಿತಿ ಪ್ರಕಟಿಸಿದೆ. ರಿಪಬ್ಲಿಕ್ ಡೇ ಸೇಲ್ ಹೆಸರಿನ ಮೂರು ದಿನಗಳ ರಿಯಾಯಿತಿ ಮಾರಾಟ ಪ್ರಕಟಿಸಿದೆ. ಮುಖ್ಯವಾಗಿ ಕೆಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಬಂಪರ್ ಆಫರ್ ಪ್ರಕಟಿಸಿದೆ.
 
ಜನವರಿ 24ರಿಂದ 26ರ ನಡುವೆ ಈ ರಿಯಾಯಿತಿ ಮಾರಾಟ ಜಾರಿಗೆ ಬರಲಿದೆ. ಸ್ಯಾಂಸಂಗ್, ಲೆನೋವೋ, ಸೋನಿ, ರೆಡ್ ಮೀ ಮೇಲೆ ಭಾರಿ ರಿಯಾಯಿತಿ, ಆಕರ್ಷಕ ಎಕ್ಸ್‌ಚೇಂಜ್ ಆಫರ್ ಪ್ರಕಟಿಸಿದೆ. ಇವುಗಳ ಜತೆಗೆ ಟಿವಿಗಳು, ಗೃಹೋಪಕರಣಗಳು, ಅಡುಗೆಮನೆ ವಸ್ತುಗಳು, ಬಟ್ಟೆಗಳು, ಸ್ಫೋರ್ಟ್ಸ್ ಎಕ್ವಿಪ್‌ಮೆಂಟ್ಸ್ ಸೇರಿದಂತೆ ಇತರೆ ವಸ್ತುಗಳ ಮೇಲೆ ರಿಯಾಯಿತಿ ಪ್ರಕಟಿಸಿದೆ. 
 
ಇದಿಷ್ಟೇ ಅಲ್ಲದೆ ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೇಲೆ ಶೇ.10ರಷ್ಟು ಕ್ಯಾಶ್ ಬ್ಯಾಕ್ ಆಫರ್ ಸಹ ನೀಡುತ್ತಿದೆ. ಆದರೆ ಏಪ್ರಿಲ್ 30ರವರೆಗೂ ಈ ಕ್ಯಾಶ್ ಕ್ರೆಡಿಟ್ ಆಗಲಿದೆ ಎಂದು ಫ್ಲಿಪ್ ಕಾರ್ಟ್ ಪ್ರಕಟಿಸಿದೆ. ಸ್ಯಾಂಸಂಗ್ ಗೆಲಾಕ್ಸಿ (ಗೋಲ್ಡ್, 32 ಜಿಬಿ) ರಿಯಾಯಿತಿ ಬೆಲೆ ರೂ.16,900, ಮೂಲ ಬೆಲೀ ರೂ.18,490; ಲೆನೆವೋ ವೈಬ್ ಕೆ5 ನೋಟ್ (ಗ್ರೇ 32 ಜಿಬಿ) 4ಜಿಬಿ ರ್ಯಾಮ್ ಬೆಲೆ ರೂ.11,499, ಮೂಲ ಬೆಲೆ ರೂ.13,499. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಫೇಸ್‌ಬುಕ್‌ನಲ್ಲಿ ಹೆಲಿಕಾಪ್ಟರ್ ಸೇರ್ ಬೆಲೆ ಎಷ್ಟು ಗೊತ್ತೆ?