Publish Date: Tue, 27 Jun 2017 (11:10 IST)
Updated Date: Tue, 27 Jun 2017 (11:16 IST)
ನವದೆಹಲಿ:150 ವರ್ಷಗಳ ಹಳೇಯ ಸಂಪ್ರದಾಯಕ್ಕೆ ತಿಲಾಂಜಲಿ ಹಾಡಲು ಮುಂದಾಗಿರುವ ಕೇಂದ್ರ ಸರ್ಕಾರ 2018ರಿಂದ ಹಣಕಾಸು ವರ್ಷವನ್ನು ಬದಲಾಯಿಸಲು ಚಿಂತನೆ ನಡೆಸಿದೆ. ಹೀಗಾಗಿ ಏಪ್ರಿಲ್ ಬದಲು ಜನವರಿಯಿಂದಲೇ ಹಣಕಾಸು ವರ್ಷ ಜಾರಿಗೆ ಬರಲಿದೆ.
ಏಪ್ರಿಲ್‌ನಿಂದ ಮಾರ್ಚ್ ಬದಲಿಗೆ, ಜನವರಿ ತಿಂಗಳಿನಿಂದ ಡಿಸೆಂಬರ್‌ವರೆಗೆ ಹಣಕಾಸು ವರ್ಷ ಪಾಲಿಸುವ ನಿರ್ಧಾರ ಅಂತಿಮವಾಗಿ ಕಾರ್ಯರೂಪಕ್ಕೆ ತರಲು ಪರಿಶೀಲನೆ ನಡೆಸಲಾಗುತ್ತಿದ್ದು, ಜೊತೆಗೆ ಮಾರ್ಚ್ ಬದಲು ನವೆಂಬರ್ ತಿಂಗಳಲ್ಲಿ ಕೇಂದ್ರ ಬಜೆಟ್ ಮಂಡಿಸಲು ನಿರ್ಧರಿಸಲಾಗುತ್ತಿದೆ.
ಹಣಕಾಸು ವರ್ಷ ಬದಲಿಸುವುದರ ಕಾರ್ಯಸಾಧ್ಯತೆ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿತ್ತು. ಸಮಿತಿಯು ಈಗಾಗಲೇ ಹಣಕಾಸು ಸಚಿವಾಲಯಕ್ಕೆ ತನ್ನ ವರದಿ ಸಲ್ಲಿಸಿದೆ.