Select Your Language

Notifications

webdunia
webdunia
webdunia
webdunia

ಮತ್ತೀಗ ಫೇಸ್‌ಬುಕ್‌ನಿಂದಲೇ ಕೆಲಸಗಿಟ್ಟಿಸಿ

ಮತ್ತೀಗ ಫೇಸ್‌ಬುಕ್‌ನಿಂದಲೇ ಕೆಲಸಗಿಟ್ಟಿಸಿ
ನವದೆಹಲಿ , ಶುಕ್ರವಾರ, 17 ಫೆಬ್ರವರಿ 2017 (13:16 IST)
ನಿಮಗೂ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮುಳುಗಿರುವ ಗೀಳಿದೆಯೇ?  ಅದರಲ್ಲೇ ಹೆಚ್ಚಿನ ಸಮಯವನ್ನು ಕಳೆಯುತ್ತೀರಾ? ನಿಮ್ಮ ಉತ್ತರ ಹೌದು, ಎಂದಾದರೆ ನಿಮಗೀಗ ಕೆಲಸ ಹುಡುಕುವುದು ಸುಲಭವಾಗಲಿದೆ. ಕೆಲಸಕ್ಕಾಗಿ ಜಾಬ್ ಪೋರ್ಟಲ್ ಜಾಲಾಡುವ ಬದಲು ಫೇಸ್‌ಬುಕ್‌ನಲ್ಲೇ ನೀವಿದನ್ನು ಮಾಡಬಹುದು.

ಹೌದು, ಫೇಸ್‌ಬುಕ್ ಈಗ ಹೊಸ ಫೀಚರ್‌ನ್ನು ಪ್ರಾರಂಭಿಸಿದೆ. ಇದರಲ್ಲಿ ಫೇಸ್‌ಬುಕ್ ಬಳಕೆದಾರರು ಕೆಲಸವನ್ನು ಹುಡುಕಬಹುದು, ಮಾರುಕಟ್ಟೆ ಸಮೀಕ್ಷಕರ ಪ್ರಕಾರ ಎಫ್‌ಬಿಯ ಈ ಹೊಸ ಫೀಚರ್ ಲಿಂಕ್ಡನ್ ಸಹಿತ ಎಲ್ಲ ಜಾಬ್ ಪೋರ್ಟಲ್‌ಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಲಿದೆ.
 
ಕಳೆದ ಕೆಲ ತಿಂಗಳಿಂದ ಫೇಸ್‌ಬುಕ್ ತನ್ನ ಜಾಬ್ ಫೀಚರ್‌ಗಾಗಿ ಅವಿರತ ಶ್ರಮಿಸುತ್ತಿತ್ತು. ಎಲ್ಲ ರೀತಿಯ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ಬಳಿಕ ಮತ್ತೀಗ ಫೇಸ್‌ಬುಕ್ ಅಧಿಕಾರಿಗಳು ಜಾಬ್ ಪೋಸ್ಟ್ ಮಾಡುವ ಫೀಚರ್‌ನ್ನು ಪ್ರಾರಂಭಿಸಿದ್ದಾರೆ. 
 
 
ವಿಶ್ವದಾದ್ಯಂತ ಫೇಸ್‌ಬುಕ್‌ಗಿರುವ ಕೋಟ್ಯಾಂತರ ಉಪಯೋಗಕರ್ತರು ಈ ಫೀಚರ್ ಲಾಭ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದ್ದು ಇದು ಜಾಬ್ ಪೋರ್ಟಲ್‌ಗಳ ನಿದ್ದೆಗೆಡಿಸಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ದುಷ್ಟ ಕೂಟ ರಚಿಸಿಕೊಂಡಿರುವ ಸಿಎಂ ಸಿದ್ದರಾಮಯ್ಯ: ಶ್ರೀನಿವಾಸ್ ಪ್ರಸಾದ್