Select Your Language

Notifications

webdunia
webdunia
webdunia
webdunia

ಈ ಬೈಕ್ ಬೆಲೆ ಒಂದು ಕೋಟಿ ರೂಪಾಯಿಗೂ ಅಧಿಕ

ಈ ಬೈಕ್ ಬೆಲೆ ಒಂದು ಕೋಟಿ ರೂಪಾಯಿಗೂ ಅಧಿಕ
New Delhi , ಸೋಮವಾರ, 16 ಜನವರಿ 2017 (09:46 IST)
ಒಂದು ಕೋಟಿ ರೂಪಾಯಿ ಬೆಲೆ ಬಾಳು ಕಾರು ಎಂದರೇನೇ ಜನ ಮೂಗಿನ ಮೇಲೆ ಬೆರಳಿಡುತ್ತಾರೆ. ಇನ್ನು ಬೈಕ್‌ಗೆ ಅಷ್ಟೆಲ್ಲಾ ಕೊಡಬೇಕು ಎಂದರೆ ಯಾರಿಗೇ ಆಗಲಿ ಅಚ್ಚರಿಯಾಗದೆ ಇರದು. ಆ ರೀತಿಯ ಬೈಕ್ ಒಂದು ಭಾರತೀಯ ಮಾರುಕಟ್ಟೆಗೆ ಅಡಿಯಿಟ್ಟಿದೆ.
 
ಇಟಾಲಿಯನ್ ಮೋಟಾರ್ ಸೈಕಲ್ ದಿಗ್ಗಜ ಡುಕಾಟಿ ಸಂಸ್ಥೆ 1299 ಸೂಪರ್ ಲೆಗೇರಾವನ್ನು ಭಾರತದ ಮಾರುಕಟ್ಟೆಗೆ ರಿಲೀಸ್ ಮಾಡಿದೆ. ಅತಿ ಕಡಿಮೆ ಮಂದಿ ದುಡ್ಡುಳ್ಳವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಬೈಕನ್ನು ತಯಾರಿಸಿದ್ದಾರೆ. ಇದರ ಬೆಲೆ ರೂ.1.12 ಕೋಟಿ (ದೆಹಲಿ ಎಕ್ಸ್ ಶೋರೂಂ ಬೆಲೆ).
 
ಸದ್ಯಕ್ಕೆ ನಮ್ಮ ದೇಶದಲ್ಲಿ ಲಭ್ಯವಾಗುತ್ತಿರುವ ಬೈಕ್‌ಗಳಲ್ಲಿ ಅತ್ಯಧಿಕ ಬೆಲೆಯೆ ಬೈಕ್ ಇದೇ. ಜಗತ್ತಿನಲ್ಲೇ ಅತ್ಯಂತ ಸುಲಭವಾದ, ಶಕ್ತಿಯುತವಾದ ಬೈಕ್ ಇದು. ಇದರ ಫ್ರೇಮನ್ನು ಅತ್ಯಂತ ಕಡಿಮೆ ಭಾರದ ಕಾರ್ಬನ್ ಫೈಬರ್‌ನಿಂದ ತಯಾರಿಸಲಾಗಿದೆ. 
 
ಚಕ್ರಗಳು ಅಷ್ಟೇ ಅತ್ಯಂತ ಬಲಿಷ್ಠವಾದ ಮೆಟೀರಿಯಲ್‌ನಿಂದ ತಯಾರಿಸಲಾಗಿದೆ. ಒಟ್ಟು ಫ್ರೇಮ್ ತೂಕ 1.7 ಕೆ.ಜಿ ಮಾತ್ರ. ಇನ್ನು ಬೈಕ್ ಒಟ್ಟಾರೆ ತೂಕ 167 ಕೆ.ಜಿ. ಈ ಬೈಕ್ ನಲ್ಲಿನ 1285 ಟ್ವಿನ್ ಸಿಲಿಂಡರ್ ಇಂಜಿನ್ ಸುಮಾರು 125 ಬಿಎಚ್‌ಪಿ ಶಕ್ತಿಯನ್ನು ಬಿಡುಗಡೆ ಮಾಡುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಮೆಜಾನ್‌ನಲ್ಲಿ 7,500 ತಾತ್ಕಾಲಿಕ ನೇಮಕಾತಿ