Webdunia - Bharat's app for daily news and videos

Install App

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

Krishnaveni K
ಗುರುವಾರ, 10 ಜುಲೈ 2025 (13:07 IST)
ಬೆಂಗಳೂರು:  ಭಾರತದ ಅತಿದೊಡ್ಡ ಸಂಯೋಜಿತ ಲಾಜಿಸ್ಟಿಕ್ಸ್ ಸೇವಾ ಸಂಸ್ಥೆಯಾಗಿರುವ ಡೆಲಿವರಿ, ತನ್ನ ಡೆಲಿವರಿ ಡೈರೆಕ್ಟ್ ಅಪ್ಲಿಕೇಶನ್ ಮೂಲಕ ದೆಹಲಿ- ಎನ್‌ಸಿಆರ್ ಮತ್ತು ಬೆಂಗಳೂರಿನಲ್ಲಿ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ (ನಗರ ವ್ಯಾಪ್ತಿಯೊಳಗೆ) ಶಿಪ್ಪಿಂಗ್ ಸೇವೆಯನ್ನು ಸಂಪೂರ್ಣವಾಗಿ ಪ್ರಾರಂಭಿಸಿದೆ.

ಈ ಸೇವೆಯನ್ನು ಅಹಮದಾಬಾದ್‌ನಲ್ಲಿ ಆರಂಭಿಸಿ ಯಶಸ್ವಿ ಪ್ರಾಯೋಗಿಕ ಕಾರ್ಯಚರಣೆಯ ನಂತರ ಇದೀಗ ಭಾರತದ ಪ್ರಮುಖ ಎರಡು ಮಹಾನಗರಗಳಿಗೆ ವಿಸ್ತರಿಸಲಾಗದೆ.  ಸ್ಥಳೀಯ ಡೆಲಿವರಿಗಾಗಿ, ಈ ಸೇವೆಯನ್ನು ಬಳಸಬಹುದು ಹಾಗೂ ಬುಕಿಂಗ್ ಮಾಡಿದ 15 ನಿಮಿಷಗಳ ಒಳಗೆ ಪಿಕ್‌ಅಪ್ ಸೌಲಭ್ಯ ದೊರೆಯುತ್ತದೆ.  ಪಾರ್ಸೆಲ್‌ಗಳನ್ನು ಸಾಗಿಸಲು ದ್ವಿಚಕ್ರ ವಾಹನಗಳನ್ನು ಮತ್ತು ದೊಡ್ಡ ಗಾತ್ರದ ಸರಕುಗಳಿಗೆ ಮೂರು ಮತ್ತು ನಾಲ್ಕು ಚಕ್ರದ ವಾಹನಗಳನ್ನು ನಿಯೋಜಿಸಲಾಗುತ್ತದೆ.  
 
ಸೇವೆಯ ವಿಸ್ತರಣೆ ಕುರಿತು ಮಾತನಾಡಿದ ಡೆಲಿವರಿಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸಾಹಿಲ್ ಬರುವಾ, "ನಾವು ಈಗ ಡೆಲಿವರಿ ಡೈರೆಕ್ಟ್‌ನೊಂದಿಗೆ ಎನ್‌ಸಿಆರ್ ಮತ್ತು ಬೆಂಗಳೂರಿನಲ್ಲಿ ಸಂಪೂರ್ಣವಾಗಿ ಸಕ್ರಿಯರಾಗಿದ್ದೇವೆ. ಇವು ಭಾರತದಲ್ಲಿ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಸೇವೆಗಳಿಗೆ ಎರಡು ಅತಿದೊಡ್ಡ ಮಾರುಕಟ್ಟೆಗಳಾಗಿವೆ ಮತ್ತು ಸೇವೆಯನ್ನು ಶೀಘ್ರದಲ್ಲೇ ಪ್ರಮುಖ ಮೆಟ್ರೋ ನಗರಗಳಿಗೂ ವಿಸ್ತರಿಸಲಿದ್ದೇವೆ," ಎಂದು ಹೇಳಿದರು. 
ಮುಂದುವರಿದ ಅವರು "ಈ ಆರಂಭವು ದೇಶಾದ್ಯಂತ ಲಕ್ಷಾಂತರ ಗ್ರಾಹಕರು ಮತ್ತು ಎಸ್‌ಎಂಇಗಳಿಗೆ ಸರಳ, ಕ್ಷಿಪ್ರ, ಕೈಗೆಟುಕುವ ದರದ ಮತ್ತು ವಿಶ್ವಾಸಾರ್ಹ ಲಾಜಿಸ್ಟಿಕ್ಸ್ ಪರಿಹಾರ ಒದಗಿಸುತ್ತದೆ.  ನಮ್ಮ ಗ್ರಾಹಕರಿಗೆ ಇಂಟ್ರಾಸಿಟಿ ಅಗತ್ಯಗಳಿಗೂ ನಮ್ಮನ್ನು ಬಳಸಿಕೊಳ್ಳಲು ನೆರವಾಗಲಿದೆ." ಎಂದು ಹೇಳಿದರು. 
 
ಡೆಲಿವರಿ ಡೈರೆಕ್ಟ್ ಗ್ರಾಹಕರಿಗೆ ಶಿಪ್ಪಿಂಗ್ ಸರಳಗೊಳಿಸುವುದರ ಜೊತೆಗೆ, ಡೆಲಿವರಿಯ ವ್ಯಾಪಕ ಜಾಲದ ಮೂಲಕ ರೈಡರ್‌ಗಳು ಮತ್ತು ಚಾಲಕರಿಗೆ ಸ್ಥಿರ ಆದಾಯ ಗಳಿಕೆಯ ಅವಕಾಶಗಳನ್ನು ನೀಡಿದೆ. ಅದೇ ರೀತಿ ಪೂರಕವಾಗಿರುವ ಕೆಲಸದ ಸಮಯವನ್ನು ಒದಗಿಸುವ ಮೂಲಕ ಗಮನಾರ್ಹ ಪ್ರಯೋಜನಗಳನ್ನು ನೀಡುತ್ತದೆ.
 
ಡೆಲಿವರಿ ಡೈರೆಕ್ಟ್ ಅಪ್ಲಿಕೇಶನ್ Google Play ಮತ್ತು Apple App Store ಗಳಲ್ಲಿ ಲಭ್ಯವಿದೆ. ಗ್ರಾಹಕರು ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಂಡು ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಆರ್ಡರ್‌ಗಳನ್ನು ಬುಕ್ ಮಾಡಬಹುದು. ಇದರ ಜೊತೆಗೆ, ಇದು ಭಾರತದ 18,800+ ಪಿನ್‌ಕೋಡ್‌ಗಳಿಗೆ (ಡೆಲಿವರಿ ಸೇವೆ ಲಭ್ಯವಿರುವ ಪ್ರದೇಶಗಳು) ಸಣ್ಣ ಮತ್ತು ದೊಡ್ಡ ಗಾತ್ರದ ಪಾರ್ಸೆಲ್‌ಗಳ ಇಂಟರ್‌ಸಿಟಿ ಶಿಪ್‌ಮೆಂಟ್‌ಗಳನ್ನು ನಿಮ್ಮ ಮನೆ ಬಾಗಿಲಿನಿಂದಲೇ ಕಳುಹಿಸಲು ಅವಕಾಶ ಕಲ್ಪಿಸುತ್ತದೆ.
 
ಡೆಲಿವರಿ ಬಗ್ಗೆ
ಡೆಲಿವರಿ ಭಾರತದ ಅತಿದೊಡ್ಡ ಸಂಯೋಜಿತ ಲಾಜಿಸ್ಟಿಕ್ಸ್ ಸೇವೆ ಒದಗಿಸುವ ಸಂಸ್ಥೆಯಾಗಿದೆ. ಇದು 18,800+ ಪಿನ್‌ಕೋಡ್‌ಗಳನ್ನು ಒಳಗೊಂಡ ದೇಶವ್ಯಾಪಿ ಜಾಲವನ್ನು ಹೊಂದಿದೆ ಮತ್ತು ಎಕ್ಸ್‌ಪ್ರೆಸ್ ಪಾರ್ಸೆಲ್ ಸಾರಿಗೆ, ಪಿಟಿಎಲ್ ಫ್ರೈಟ್, ಟಿಎಲ್ ಫ್ರೈಟ್, ಕ್ರಾಸ್-ಬಾರ್ಡರ್, ಸಪ್ಲೈ ಚೈನ್ ಮತ್ತು ತಂತ್ರಜ್ಞಾನ ಸೇವೆಗಳಂತಹ ವ್ಯಾಪಕ ಶ್ರೇಣಿಯ ಲಾಜಿಸ್ಟಿಕ್ಸ್ ಸೇವೆಗಳನ್ನು ಒದಗಿಸುತ್ತದೆ. ತನ್ನ ಆರಂಭದಿಂದಲೂ, ಡೆಲಿವರಿ 3.6 ಶತಕೋಟಿಗಿಂತಲೂ ಹೆಚ್ಚು ಶಿಪ್‌ಮೆಂಟ್‌ಗಳನ್ನು ಯಶಸ್ವಿಯಾಗಿ ಪೂರೈಸಿದೆ ಮತ್ತು ಪ್ರಸ್ತುತ 44,000+ ಗ್ರಾಹಕರೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇವರಲ್ಲಿ ದೊಡ್ಡ ಮತ್ತು ಸಣ್ಣ ಇ-ಕಾಮರ್ಸ್ ಪಾಲುದಾರರು, ಎಸ್‌ಎಂಇಗಳು ಮತ್ತು ಇತರ ಉದ್ಯಮಗಳು ಹಾಗೂ ಬ್ರ್ಯಾಂಡ್‌ಗಳು ಸೇರಿವೆ. ಡೆಲಿವರಿ ಬಗ್ಗೆ ಹೆಚ್ಚಿನ ಮಾಹಿತಿಗಾಗಿ, ದಯವಿಟ್ಟು [www.delhivery.com](https://www.delhivery.com) ಗೆ ಭೇಟಿ ನೀಡಿ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

2029 ರಲ್ಲಿ ಕೇಂದ್ರದಲ್ಲಿ ನಾವು ಬಂದಾಗ ಬಿಜೆಪಿಯವರನ್ನು ತಿಹಾರ್ ಜೈಲಿಗೆ ಹಾಕ್ತೀವಿ: ಪ್ರದೀಪ್ ಈಶ್ವರ್

ಸಂವಿಧಾನಕ್ಕೆ ಅಪಚಾರ ಮಾಡಿದ ಪಕ್ಷ ಎಂದರೆ ಕಾಂಗ್ರೆಸ್: ಛಲವಾದಿ ನಾರಾಯಣಸ್ವಾಮಿ

5 ವರ್ಷ ನಾನೇ ಸಿಎಂ ಎಂದ ಸಿದ್ದರಾಮಯ್ಯ: ಲೈಫ್ ಟೈಂ ನಾನೇ ಎನ್ನಿ ಎಂದ ಡಿಕೆಶಿ ಫ್ಯಾನ್ಸ್

ರಾಹುಲ್ ಗಾಂಧಿ ಭೇಟಿಗೆ ಮುನ್ನ ನಾನೇ ಸಿಎಂ ಎಂದು ಘರ್ಜಿಸಿದ ಸಿದ್ದರಾಮಯ್ಯ

ಆ್ಯಪ್ ಮೂಲಕ ಆನ್‌-ಡಿಮ್ಯಾಂಡ್ ಇಂಟ್ರಾಸಿಟಿ ಶಿಪ್ಪಿಂಗ್ ಸೇವೆ ಆರಂಭಿಸಿದ ಡೆಲಿವರಿ

ಮುಂದಿನ ಸುದ್ದಿ
Show comments