ಸ್ಮಾರ್ಟ್‌ಪೋನ್ ತಯಾರಿಕಾ ಸಂಸ್ಥೆಯಾಗಿರುವ ಕೂಲ್‌ಪ್ಯಾಡ್, ಭಾರತದ ಮಾರುಕಟ್ಟೆಗೆ ಹೊಸ ಆವೃತ್ತಿಯ ನೋಟ್ 3+ ಸ್ಮಾರ್ಟ್‌ಪೋನ್ ಬಿಡುಗಡೆ ಮಾಡಿದೆ. ಈ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಗ್ರಾಹಕರಿಗೆ 8,999 ರೂಪಾಯಿಗಳಲ್ಲಿ ಲಭ್ಯವಿದೆ.
ಕೂಲ್‌ಪ್ಯಾಡ್ ನೋಟ್ 3+ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು ಮೇ 13 ರಿಂದ ಅಮೆಜಾನ್ ಮಾರುಕಟ್ಟೆಯಲ್ಲಿ ವೈಟ್ ಮತ್ತು ಗೋಲ್ಡ್ ಬಣ್ಣದಲ್ಲಿ ಲಭ್ಯವಿದೆ.
ಈ ಪೋನ್‌ಗಳು 5.5 ಇಂಚಿನ ಫುಲ್ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ, 1.3 ಜಿಎಚ್‌ಝಡ್ ಆಕ್ಟಾ ಕೋರ್ ಮೀಡಿಯಾಟೆಕ್ 6753 ಎಸ್‌ಒಸಿ, 3ಜಿಬಿ ರ್ಯಾಮ್ ಹೊಂದಿದೆ. ಕೂಲ್‌ಪ್ಯಾಡ್ ನೋಟ್ 3+ ಪೋನ್‌ಗಳು ಮೈಕ್ರೋ ಸಿಮ್+ ಮೈಕ್ರೋ ಸಿಮ್ ಡ್ಯುಯಲ್ ಸಿಮ್ ಒಳಗೊಂಡಿದ್ದು, 13 ಮೆಗಾ ಪಿಕ್ಸೆಲ್ ರಿಯರ್ ಕ್ಯಾಮೆರಾ, 5 ಮೆಗಾ ಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಮತ್ತು ಫಿಂಗರ್ಪ್ರಿಂಟ್ ಸೆನ್ಸಾರ್ ವೈಶಿಷ್ಟ್ಯ ಹೊಂದಿದೆ.
ಕೂಲ್‌ಪ್ಯಾಡ್ ನೋಟ್ 3+ ಆವೃತ್ತಿಯ ಸ್ಮಾರ್ಟ್‌ಪೋನ್‌ಗಳು 16 ಜಿಬಿ ಆಂತರಿಕ ಸ್ಟೋರೇಜ್ ಸಾಮರ್ಥ್ಯದ ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 64 ಜಿಬಿ ವಿಸ್ತರಣೆಯ ಸ್ಟೋರೇಜ್ ಸಾಮರ್ಥ್ಯ ಮತ್ತು 3000 ಎಮ್‌ಎಎಚ್ ಬ್ಯಾಟರಿ ಹೊಂದಿದೆ. ಈ ಆವೃತ್ತಿಯ ಪೋನ್‌ಗಳು 802.11 ಬಿ/ಜಿ/ಎನ್ ವೈ-ಫೈ, ಜಿಪಿಎಸ್/ಎ-ಜಿಪಿಎಸ್, ವಿ4.0 ಬ್ಲೂಟೂತ್, ಎಫ್‌ಎಮ್ ರೇಡಿಯೋ, 3ಜಿ ಮತ್ತು 4ಜಿ ಕನೆಕ್ಟಿವಿಟಿ ಸೌಲಭ್ಯವನ್ನು ಹೊಂದಿದೆ.