Select Your Language

Notifications

webdunia
webdunia
webdunia
webdunia

ಕೋಕಾ ಕೋಲಾದಿಂದ ಆಕ್ವಾರಿಸ್ ಪಾನೀಯ

ಕೋಕಾ ಕೋಲಾದಿಂದ ಆಕ್ವಾರಿಸ್ ಪಾನೀಯ
New Delhi , ಗುರುವಾರ, 29 ಡಿಸೆಂಬರ್ 2016 (09:43 IST)
ಕೋಕಾ ಕೋಲಾ ಕಂಪನಿ ದೇಶೀಯ ಮಾರುಕಟ್ಟೆಗೆ ಆಕ್ಟೀವ್ ಹೈಡ್ರೇಶನ್ ಪಾನೀಯ ಆಕ್ವಾರೀಸ್‌ ಬಿಡುಗಡೆ ಮಾಡಿದೆ. ನಿಂಬೆಹಣ್ಣಿನ ಸ್ವಾದ, ಇತರೆ ಪೋಷಕಾಂಶಗಳ ರಿಫ್ರೆಷಿಂಗ್ ಪಾನೀಯವಾಗಿ ಆಕ್ವಾರೀಸ್ ಪರಿಚಯಿಸುತ್ತಿರುವುದಾಗಿ ಕಂಪನಿ ಹೇಳಿದೆ.
 
ಈ ವಿಭಾಗದದಲ್ಲಿ ಪ್ರಸ್ತುತ ಇರುವ ಪಾನೀಯಗಳಲ್ಲಿ ಈ ಹೊಸ ಉತ್ಪನ್ನ ಮತ್ತಷ್ಟು ಪುಷ್ಟಿತರಲಿದೆ ಎಂದಿದೆ ಕಂಪನಿ. ಮುಂದಿನ ವರ್ಷಗಳಲ್ಲಿ ಆಕ್ಟೀವ್ ಹೈಡ್ರೇಶನ್ ವಿಭಾಗವನ್ನು ವಿಸ್ತೃತವಾಗಿ ಅಭಿವೃದ್ಧಿ ಮಾಡಲು ಅವಕಾಶ ಇರುವ ಕಾರಣ ಈ ವಿಭಾಗಕ್ಕೆ ಅಡಿಯಿಟ್ಟಿದ್ದೇವೆ ಎಂದು ಕೋಕಾ ಕೋಲಾ ಕಂಪನಿ ತಿಳಿಸಿದೆ.
 
ನಾನ್ ಕಾರ್ಬೋನೇಟೆಡ್, ಕಡಿಮೆ ಕ್ಯಾಲರಿ ಸೋಡಿಯಂ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಒಳಗೊಂಡಿರುವ ಆಕ್ವಾರೀಸ್ 450 ಎಂಎಲ್ ಪ್ಯಾಕ್ ಬೆಲೆ ರೂ.30 ಎಂದು ಕಂಪನಿ ವಿವರ ನೀಡಿದೆ. ಕೋಕಾ ಕೋಲಾ ಕಂಪನಿಯ ಈ ಹೊಸ ಉತ್ಪನ್ನಕ್ಕೆ ಒಳ್ಳೇ ಬೇಡಿಕೆ ಬರುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದಲ್ಲಿ ಸಖತ್ ಜೋರಾಗಿದೆ 4ಜಿ ಹವಾ