ಹಬ್ಬದ ಸಂದರ್ಭದಲ್ಲಿ ಕಾರು ಖರೀದಿಸುವವರಿಗೆ ಐಸಿಐಸಿಐ ಬ್ಯಾಂಕ್ ನಿಂದ ಬಂಪರ್ ಆಫರ್

ಗುರುವಾರ, 18 ಅಕ್ಟೋಬರ್ 2018 (14:33 IST)
ಬೆಂಗಳೂರು : ಈ ಹಬ್ಬದ ದಿನಗಳಲ್ಲಿ ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ತನ್ನ ಗ್ರಾಹಕರಿಗೆ ಬಂಪರ್ ಆಫರ್ ಒಂದನ್ನು ನೀಡಿದೆ.

ಹೌದು. ಐಸಿಐಸಿಐ ಬ್ಯಾಂಕ್ ನಲ್ಲಿ ಉಳಿತಾಯ ಖಾತೆ ಹೊಂದಿರುವ ಅರ್ಹ ಗ್ರಾಹಕರಿಗೆ ಕಾರು ಖರೀದಿಸಲು ಶೇಕಡ ನೂರರಷ್ಟು ಸಾಲ ನೀಡುವುದಾಗಿ ಹೇಳಿದ್ದು, ಈ ಮೊತ್ತ 20 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಹಬ್ಬದ ಸಂದರ್ಭದಲ್ಲಿ ಕಾರು ಖರೀದಿಸಬೇಕು ಅಂತ ಅಂದುಕೊಂಡಿರುವವರಿಗೆ ಇದು ಸಿಹಿ ಸುದ್ದಿ.

 

ಐಸಿಐಸಿಐ ಬ್ಯಾಂಕ್, ಆನ್ ರೋಡ್ ಪ್ರೈಸ್ ಮೇಲೆ ಶೇಕಡ ನೂರರಷ್ಟು ಸಾಲ ನೀಡುತ್ತಿದ್ದು, ಕೇವಲ 4 ಗಂಟೆಗಳಲ್ಲಿ ಸಾಲ ಲಭ್ಯವಾಗುತ್ತದೆ ಎಂದು ತಿಳಿಸಿದೆ. ಈ ಸೌಲಭ್ಯ ಪಡೆಯಲು ತಾವು ಅರ್ಹರಾಗಿದ್ದೆವೆಯೇ ಎಂಬುದನ್ನು ತಿಳಿಯಲು ಬ್ಯಾಂಕ್ ಗ್ರಾಹಕರು ತಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಯಿಂದ 5676766 ಸಂದೇಶ ಕಳುಹಿಸಬಹುದು ಅಥವಾ ಸಮೀಪದ ಬ್ರಾಂಚ್ ಭೇಟಿ ನೀಡಬೇಕಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಆಶೀರ್ವಾದ ಪಡೆಯಲು ಮಗುವನ್ನು ಹಾವಿನ ಬಳಿ ಇಟ್ಟ ದಂಪತಿಗಳು. ಆಮೇಲೇನಾಯ್ತು ಗೊತ್ತಾ?