Webdunia - Bharat's app for daily news and videos

Install App

ಬಿಎಸ್‌ಎನ್‌ಎಲ್‌ನಿಂದ ಗ್ರಾಹಕರಿಗಾಗಿ ವಿಶೇಷ ಕೊಡುಗೆ ಘೋಷಣೆ

Webdunia
ಮಂಗಳವಾರ, 30 ಆಗಸ್ಟ್ 2016 (15:04 IST)
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್‌ಎನ್‌ಎಲ್) ಮುಂದಿನ ಮೂರು ತಿಂಗಳ ಅವಧಿಯಲ್ಲಿ ವಿಶೇಷ ಅಧಿಕಾರಿಗಳ ಮೂಲಕ ಸಂಪರ್ಕಗಳ ಸಂಖ್ಯೆಯನ್ನು ಹೆಚ್ಚಿಸಿ ಲ್ಯಾಂಡ್‌ಲೈನ್ ದೂರವಾಣಿಗಳ ಜನಪ್ರಿಯತೆಯನ್ನು ಪುನಶ್ಚೇತನಗೊಳಿಸಲು ಯೋಜನೆ ರೂಪಿಸುತ್ತಿದೆ. 
 
ಐದು ವರ್ಷಗಳ ಹಿಂದೆ ಕೊಯಿಮತ್ತೂರು ಹಾಗೂ ತಿರುಪುರ್ ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಅಧಿಕ ಲ್ಯಾಂಡ್‌ಲೈನ್ ದೂರವಾಣಿ ಸಂಪರ್ಕಗಳಿದ್ದವು. ಇದೀಗ, ಲ್ಯಾಂಡ್‌‌ಲೈನ್ ಸಂಪರ್ಕದಲ್ಲಿ 1.52 ಲಕ್ಷದಷ್ಟು ಕುಸಿತ ಕಂಡಿದೆ ಎಂದು ಕೊಯಿಮತ್ತೂರಿನ ಬಿಎಸ್‌ಎನ್‌ಎಲ್ ಪ್ರಧಾನ ಜನರಲ್ ಮ್ಯಾನೇಜರ್ ಡಿ.ಶಿವರಾಜ್ ಮಾಹಿತಿ ನೀಡಿದ್ದಾರೆ.
 
ಒಟ್ಟು ಲ್ಯಾಂಡ್‌ಲೈನ್ ದೂರವಾಣಿ ಸಂಪರ್ಕದಲ್ಲಿ ಪ್ರತಿವರ್ಷ 5 ಪ್ರತಿಶತದಷ್ಟು ಕುಸಿತ ಕಂಡುಬರುತ್ತಿದೆ. 
 
ವಾಣಿಜ್ಯ ಸಂಸ್ಥೆಗಳು ಹಾಗೂ ಮೊಬೈಲ್ ಪೋನ್‌ಗಳನ್ನು ಬಳಸಲು ಸಾಧ್ಯವಾಗದ ಹಿರಿಯ ವಯಸ್ಸಿನವರಿಗೆ ಲ್ಯಾಂಡ್‌ಲೈನ್ ಪೋನ್‌ಗಳ ಉತ್ತಮ ಸ್ಪಷ್ಟತೆಯ ಸಂಭಾಷನೆಯನ್ನು ನೀಡುವಲ್ಲಿ ಸಹಕಾರಿಯಾಗಿವೆ ಎಂದು ಹೇಳಿದರು. 
 
ಪ್ರಸಕ್ತ ಸಾಲಿನ ಅಗಸ್ಟ್ 15 ರಿಂದ 90 ದಿನಗಳ ಅವಧಿಯವರೆಗೂ ಪ್ರಚಾರ ಕೊಡುಗೆಯಾಗಿ 'ಎಕ್ಸ್‌ಪಿರಿಯನ್ಸ್ ಎಲ್ಎಲ್ 49' ಹೆಸರಿನ ಹೊಸ ಯೋಜನೆಯನ್ನು ಪರಿಚಯಿಸಲಾಗಿದೆ ಎಂದರು. 
 
ಈ ಯೋಜನೆಯ ಮೂಲಕ 15 ಸಾವಿರ ಹೊಸ ಲ್ಯಾಂಡ್‌ಲೈನ್ ಸೇವೆಗಳ ಸಂಪರ್ಕ ಹೆಚ್ಚಿಸುವ ಗುರಿ ಹೊಂದಲಾಗಿದೆ. 
 
ಕೊಯಿಮತ್ತೂರು ಹಾಗೂ ತಿರುಪುರ್ ಜಿಲ್ಲೆಗಳಲ್ಲಿ 9 ಲಕ್ಷ ಬಿಎಸ್‌ಎನ್‌ಎಲ್ ಮೊಬೈಲ್ ಚಂದಾದಾರರಿದ್ದು, ಪ್ರತಿ ವರ್ಷ ಬಿಎಸ್‌ಎನ್‌ಎಲ್ ಮೊಬೈಲ್ ಚಂದಾದಾರರ ಸಂಖ್ಯೆ 12 ಪ್ರತಿಶತ ಚೇತರಿಕೆಯಾಗುತ್ತಿದೆ ಎಂದು ಶಿವರಾಜ್ ಮಾಹಿತಿ ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments