ಹೊಸ ತಂತ್ರಜ್ಞಾನ ಬಳಸಿಕೊಂಡು 2021 ರ ವೇಳೆಗೆ ಸ್ವಯಂ ಚಾಲಿತ ಕಾರುಗಳನ್ನು ಮಾರುಕಟ್ಟೆಗೆ ತರಲು ದೈತ್ಯ ಕಾರು ತಯಾರಿಕಾ ಸಂಸ್ಥೆ ಬಿಎಂಡಬ್ಲೂ, ಇಂಟೆಲ್ ಮತ್ತು ಮೊಬಿಲೆಯೆ ಕಂಪೆನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಅತ್ಯಾಧುನಿಕ ಐಷಾರಾಮಿ ಕಾರುಗಳ ತಯಾರಿಕೆಯಲ್ಲಿ ಛಾಪು ಮೂಡಿಸಿರುವ ಬಿಎಂಡಬ್ಲ್ಯೂ ಸಂಸ್ಥೆ, ಚಾಲಕ ರಹಿತ ಕಾರುಗಳನ್ನು ಅಭಿವೃದ್ಧಿ ಪಡಿಸುತ್ತಿರುವ ಸಿಲಿಕಾನ್ ವ್ಯಾಲಿಯ ಗೂಗಲ್, ತೆಲ್ಸಾ ಮತ್ತು ಆಪಲ್ ಕಂಪೆನಿಗಳಿಗೆ ತೀವ್ರ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗುತ್ತಿದೆ.
ಅತ್ಯಾಧುನಿಕ ಸ್ವಯಂ ಚಾಲಿತ ಕಾರುಗಳ ಸಂಚಾರ ನ್ಯಾವಿಗೇಟ್ ಸರಳಗೊಳಿಸಲು ಮತ್ತು ಕಾರುಗಳು ಅಪಘಾತ ತಡೆಯುವಂತೆ ಸಿದ್ಧಪಡಿಸಲು ಪ್ರಬಲ ಮತ್ತು ವಿಶ್ವಾಸಾರ್ಹ ವಿದ್ಯುನ್ಮಾನ ಮಿದುಳುಗಳು ಅವಶ್ಯಕ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಇಂಟೆಲ್ ಪ್ರಧಾನ ಕಾರ್ಯದರ್ಶಿ ಬ್ರಿಯಾನ್ ಅವರು ತಿಳಿಸಿದ್ದಾರೆ.
ಮುಂಬರುವ 2021 ರ ವೇಳೆಗೆ ಅತ್ಯಾಧುನಿಕ ಮತ್ತು ಸ್ವಯಂಚಾಲಿತ ಕಾರುಗಳನ್ನು ಮಾರುಕಟ್ಟೆಗೆ ತರುವುದು ನಮ್ಮ ಉದ್ದೇಶವಾಗಿದೆ ಎಂದು ಮೂರು ಕಂಪೆನಿಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿವೆ.
ಈಗಾಗಲೇ ಅತ್ಯಾಧುನಿಕ ವೇಗ ನಿಯಂತ್ರಣ ವ್ಯವಸ್ಥೆಗಳು ಸಕ್ರಿಯಗೊಳಿಸಲಾಗಿದ್ದು, ಈ ಕಾರುಗಳಲ್ಲಿ ಕ್ಯಾಮೆರಾ ಮತ್ತು ಕಂಪ್ಯೂಟರ್ ಮೂಲಕ ಕಾರ್ಯನಿರ್ವಹಣೆ ಮಾಡಿದರೂ ಕಾರು ನಿಯಂತ್ರಿಸಲು ಚಾಲಕರು ಅಗತ್ಯವಾಗಿದ್ದಾರೆ ಎಂದು ಕಂಪೆನಿ ತಿಳಿಸಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.