ಶೇರುಪೇಟೆಗಳ ಸ್ಥಿರವಹಿವಾಟಿನ ಮಧ್ಯೆಯೂ ಬ್ಯಾಂಕ್‌ಗಳು ಮತ್ತು ರಫ್ತು ವಹಿವಾಟುದಾರರು ಡಾಲರ್‌ಗಳ ಮಾರಾಟಕ್ಕೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 20 ಪೇಸೆ ಚೇತರಿಕೆ ಕಂಡು 67.32 ರೂಪಾಯಿಗಳಿಗೆ ತಲುಪಿದೆ.
ಶೇರು ಮಾರುಕಟ್ಟೆಗಳಲ್ಲಿ ವಿದೇಶಿ ಬಂಡವಾಳದ ಒಳ ಹರಿವು ಹೆಚ್ಚಳವಾದ ಪರಿಣಾಮ ಬ್ಯಾಂಕುಗಳು ಮತ್ತು ರಫ್ತು ವಹಿವಾಟುದಾರರು ಡಾಲರ್ ಮಾರಾಟಕ್ಕೆ ಹೆಚ್ಚಿನ ಆಸಕ್ತಿ ತೋರಿದ್ದರಿಂದ ರೂಪಾಯಿ ಮೌಲ್ಯದಲ್ಲಿ ಚೇತರಿಕೆ ಕಂಡಿದೆ.
ವಿದೇಶಿ ಬಂಡವಾಳದ ಒಳ ಹರಿವು ಮತ್ತು ಉತ್ಪಾದನಾ ಕ್ಷೇತ್ರದ ಚೇತರಿಕೆ ಹಿನ್ನೆಲೆಯಲ್ಲಿ ಬಿಎಸ್‌ಇ ಸಂವೇದಿ ಸೂಚ್ಯಂಕ 145 ಪಾಯಿಂಟ್‌ಗಳಷ್ಟು ಚೇತರಿಸಿಕೊಂಡು 27,145 ಅಂಕಗಳಿಗೆ ತಲುಪಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.