Select Your Language

Notifications

webdunia
webdunia
webdunia
webdunia

ಟಾಟಾ ಮೋಟಾರ್ಸ್ ಸಂಸ್ಥೆಗೆ ಹಿನ್ನೆಡೆ: ಸಿಂಗೂರ್ ಭೂ ಸ್ವಾಧೀನವನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್

ಟಾಟಾ ಮೋಟಾರ್ಸ್ ಸಂಸ್ಥೆಗೆ ಹಿನ್ನೆಡೆ: ಸಿಂಗೂರ್ ಭೂ ಸ್ವಾಧೀನವನ್ನು ತಿರಸ್ಕರಿಸಿದ ಸುಪ್ರೀಂಕೋರ್ಟ್
ನವದೆಹಲಿ , ಬುಧವಾರ, 31 ಆಗಸ್ಟ್ 2016 (17:30 IST)
ಪಶ್ಚಿಮ ಬಂಗಾಳದ ಸಿಂಗನೂರಿನ ಟಾಟಾ ನ್ಯಾನೋ ಘಟಕಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿ ವಿವಾದ ಕುರಿತಂತೆ ಕೋಲ್ಕತಾ ಹೈಕೋರ್ಟ್ ನೀಡಿದ ತೀರ್ಪಿಗೆ ವಿರುದ್ಧವಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಗೆ ಹಿನ್ನೆಡೆಯಾಗಿದೆ. 
 
2006 ರ ಸಾಲಿನಲ್ಲಿ ಅಂದಿನ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ನೇತೃತ್ವದ ಸರ್ಕಾರ, ಟಾಟಾ ಮೋಟಾರ್ಸ್‌ನ ನ್ಯಾನೋ ಕಾರು ಉತ್ಪಾದನೆಗಾಗಿ ಸಿಂಗೂರಿನ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿತ್ತು. 
 
ಭೂಸ್ವಾಧೀನ ಇಲಾಖೆಯ ಅಧಿಕಾರಿಗಳು ಭೂ ಸ್ವಾಧೀನ ಕುರಿತಂತೆ ಭೂಮಿ ಕಳೆದುಕೊಂಡ ರೈತರ ದೂರುಗಳಿಗೆ ಸ್ಪಂದಿಸದೆ ಸರಿಯಾದ ವಿಚಾರಣೆ ನಡೆಸದೇ ರೈತರ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ.
 
ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾದ ವಿ.ಗೋಪಾಲ್ ಮತ್ತು ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ,  ಕಳೆದ 10 ವರ್ಷಗಳಿಂದ ರೈತರ ಭೂಮಿಯನ್ನು ಸರಕಾರ ಕಿತ್ತುಕೊಂಡಿದ್ದರಿಂದ ಭೂಮಿ ಕಳೆದುಕೊಂಡ ರೈತರು ಸರಕಾರ ನೀಡಿದ ಪರಿಹಾರ ಧನವನ್ನು ವಾಪಸ್ ಕೊಡುವ ಅಗತ್ಯವಿಲ್ಲ ಎಂದು ತೀರ್ಪು ನೀಡಿದ್ದಾರೆ.
 
ಭೂ ಸ್ವಾಧೀನದ ಸಂದರ್ಭದಲ್ಲಿ ಪರಿಹಾರ ದನವನ್ನು ಮಡೆದುಕೊಳ್ಳದ ರೈತರಿಗೆ 12 ವಾರಗಳಲ್ಲಿ ತಮ್ಮ ಭೂಮಿಯನ್ನು ಹಸ್ತಾಂತರಿಸಲಾಗುತ್ತದೆ ಎಂದು ತಿಳಿಸಿದರು. 
 
ಪ್ರಸಕ್ತ ಸಾಲಿನ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಗೋಪಾಲ ಗೌಡ ಹಾಗೂ ಅರುಣ್ ಮಿಶ್ರಾ ನೇತೃತ್ವದ ಪೀಠ ಟಾಟಾ ಮೋಟರ್ಸ್ ವಾದವನ್ನು ಆಲಿಸಿತ್ತು. ಈ ವೇಳೆ ಬಂಗಾಳ ಸರಕಾರದ ಹಾಗೂ ರೈತರ ಬೇಡಿಕೆಗಳನ್ನು ಆಲಿಸಿದ್ದ ಕೋರ್ಟ್‌ ತಮ್ಮ ತೀರ್ಪನ್ನು ಕಾಯ್ದಿರಿಸಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಆಪಲ್ ಐಫೋನ್ 7 ದರ ಲೀಕ್: ಐಫೋನ್-7 ದರ ಎಷ್ಟು ಗೊತ್ತಾ?