Select Your Language

Notifications

webdunia
webdunia
webdunia
webdunia

ಕೇಂದ್ರ ಸರ್ಕಾರದ ನೀತಿ ಖಂಡಿಸಿ ಜುಲೈ 29 ರಿಂದ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ

ಕೇಂದ್ರ ಸರ್ಕಾರದ ನೀತಿ ಖಂಡಿಸಿ ಜುಲೈ 29 ರಿಂದ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ
ನವದೆಹಲಿ , ಗುರುವಾರ, 12 ಮೇ 2016 (18:52 IST)
ಬ್ಯಾಂಕಿಂಗ್ ವಲಯ ಸುಧಾರಣೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಮತ್ತು ಕೆಲವು ವಿಷಯದಲ್ಲಿ ನಿಷ್ಕ್ರಿಯತೆಯನ್ನು ಖಂಡಿಸಿ 9 ಬ್ಯಾಂಕ್ ಸಂಘಟನೆಗಳು ಜುಲೈ 29 ರಿಂದ ಮುಷ್ಕರ ನಡೆಸಲು ತೀರ್ಮಾನಿಸಿದೆ.
ಬ್ಯಾಂಕ್ ಸಂಘಗಳ ಸಂಯುಕ್ತ ವೇದಿಕೆ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಖಿಲ ಭಾರತೀಯ ಬ್ಯಾಂಕ್ ನೌಕರರ ಒಕ್ಕೂಟದ ಜನರಲ್ ಸೆಕ್ರೆಟರಿ ಸಿ. ಹೆಚ್. ವೆಂಕಟಾಚಾಲಂ ತಿಳಿಸಿದ್ದಾರೆ. 
 
ಬ್ಯಾಂಕಿಂಗ್ ಸೆಕ್ಟರ್‌ನ ಬ್ಯಾಡ್‌ಲೋನ್‌ 10 ಲಕ್ಷ ಕೋಟಿಗೆ ಹೆಚ್ಚಳಶವಾಗಿದ್ದು, ಈ ಪೈಕಿ ಅತಿ ಹೆಚ್ಚು ಬಾಕಿ ಹಣ ಉಳಿಸಿಕೊಂಡಿರುವವರು ಕಾರ್ಪೊರೇಟ್ ವಲಯದವರಾಗಿದ್ದಾರೆ. ಬಾಕಿ ಹಣ ವಸೂಲಿ ಮಾಡಲು ಕೇಂದ್ರ ಸರ್ಕಾರ  ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ವೆಂಕಟಾಚಲಂ ಹೇಳಿದ್ದಾರೆ. 
 
7 ,000 ಉದ್ದೇಶ ಪೂರ್ವಕ ಬಾಕಿದಾರರಿದ್ದು, ಇವರಿಂದ 60 ,000 ಕೋಟಿ ಬಾಕಿ ಹಣ ವಸೂಲಿ ಆಗಬೇಕಿದ್ದು, ಇಂತಹ ಬಾಕಿದಾರರ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವಂತೆ ವೆಂಕಟಾಚಲಂ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು ಚುನಾವಣೆ: ಜಯಾ, ಕರುಣಾ ಪಕ್ಷಗಳ ಪ್ರಚಾರಕ್ಕೆ ಒಬ್ಬಳೇ ಮಹಿಳೆ