ಆಸ್ಟ್ರೇಲಿಯಾ ಮೂಲದ ಸ್ಫೋರ್ಟ್ಸ್ ದ್ವಿಚಕ್ರ ವಾಹನ ತಯಾರಿ ಸಂಸ್ಥೆ ಕೆಟಿಎಂ ಆರ್‌ಸಿ ಶ್ರೇಣಿಯಲ್ಲಿ ಹೊಸ ಬೈಕ್‍ಗಳನ್ನು ಬಿಡುಗಡೆ ಮಾಡಿದೆ. ಇನ್ನಷ್ಟು ಸುಧಾರಿತ ಆರ್‌ಸಿ-390, ಆರ್‌ಸಿ-200 ಬೈಕ್‌ಗಳನ್ನು ಬಜಾಜ್ ಆಟೋ ಗುರುವಾರ ಬಿಡುಗಡೆ ಮಾಡಿದೆ.
ಕೆಟಿಎಂ ಜೊತೆಗೆ ಬಜಾಜ್ ಆಟೋ ಶೇ.49ರಷ್ಟು ಪಾಲು ಹೊಂದಿದೆ. ದೇಶದಲ್ಲಿ ಕೆಟಿಎಂ ಬೈಕ್‍ಗಳ ತಯಾರಿ, ಮಾರುಕಟ್ಟೆ ಹಕ್ಕುಗಳನ್ನು ಸಹ ಬಜಾಜ್ ಹೊಂದಿದೆ. ಆರ್‌ಸಿ-390 ಬೆಲೆ ರೂ.2.25 ಲಕ್ಷ, ಆರ್‌ಸಿ-200ರ ಬೆಲೆ ರೂ.1.71 ಲಕ್ಷ (ಎಕ್ಸ್‌ಶೋರೂಂ ದೆಹಲಿ) ಎಂದು ಕಂಪೆನಿ ನಿರ್ಧರಿಸಿದೆ.
ಈ ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ಇದರ ಬೆಲೆ ಹೆಚ್ಚಿಸಿದ್ದೇವೆಂದು, ಬಿಎಸ್-4 ಪ್ರಮಾಣಗಳೊಂದಿಗೆ ತಂದಿರುವ ಕಾರಣ ಬೆಲೆ ಏರಿಕೆಗೆ ಕಾರಣ ಎಂದು ಬಜಾಜ್ ಆಟೋ (ಪ್ರೋಬೈಕಿಂಗ್) ಅಧ್ಯಕ್ಷ ಅಮಿತ್ ನಂದಿ ತಿಳಿಸಿದ್ದಾರೆ. ಕೆಟಿಎಂ ಬೈಕ್‍ಗಳ ಮಾರಾಟ ವರ್ಷಕ್ಕೆ ಶೇ.46ರಷ್ಟು ದಾಖಲಾಗುತ್ತಿದೆ ಎಂದು ಕಂಪೆನಿ ತಿಳಿಸಿದೆ.
ಮುಂಬರುವ ಆರ್ಥಿಕ ವರ್ಷದಲ್ಲಿ ಹೊಸದಾಗಿ 75 ಡೀಲರ್‌ಶಿಪ್‌ಗಳೊಂದಿಗೆ, ಮಾರಾಟ ಕೇಂದ್ರಗಳ ಸಂಖ್ಯೆಯನ್ನು 450ಕ್ಕೆ ಹೆಚ್ಚಿಸುವುದಾಗಿ ತಿಳಿಸಿದ್ದಾರೆ. ಯುವಕರಿಗೆ ಇಷ್ಟವಾಗುವಂತೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಬೈಕನ್ನು ತಯಾರಿಸಲಾಗಿದೆ ಎಂದು ಬಜಾಜ್ ಆಟೋ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ರಾಜೀವ್ ಬಜಾಜ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.