Webdunia - Bharat's app for daily news and videos

Install App

ಟಿಕ್ ​ಟಾಕ್​ ವಿಡಿಯೋ ಆ್ಯಪ್​ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್

Webdunia
ಶುಕ್ರವಾರ, 5 ಏಪ್ರಿಲ್ 2019 (13:25 IST)
ನವದೆಹಲಿ : ಟಿಕ್ ​ಟಾಕ್​ ವಿಡಿಯೋ ಆ್ಯಪ್​ ಬಳಕೆದಾರರಿಗೊಂದು ಬ್ಯಾಡ್ ನ್ಯೂಸ್. ಟಿಕ್​ ಟಾಕ್​ ಆ್ಯಪ್​ ಅನ್ನು ಬ್ಯಾನ್​ ಮಾಡಲು ಮದ್ರಾಸ್​ ಹೈಕೋರ್ಟ್​ ಸರ್ಕಾರಕ್ಕೆ ಸೂಚನೆ ನೀಡಿದೆ.


ಹೌದು. ಇತ್ತೀಚಿನ ದಿನಗಳಲ್ಲಿ ಟಿಕ್ ​ಟಾಕ್​ ಆ್ಯಪ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಭಾರತದ 130 ಕೋಟಿ ಜನರು ಟಿಕ್​ ಟಾಕ್​ ಬಳಸುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಟಿಕ್​ ಟಾಕ್​ ಆ್ಯಪ್ ​ನಲ್ಲಿ ವಿಭಿನ್ನ ಎಫೆಕ್ಟ್​ ಗಳೊಂದಿಗೆ ವಿಡಿಯೋ ಚಿತ್ರೀಕರಿಸಬಹುದು ಮತ್ತು ಶಾರ್ಟ್​ ವಿಡಿಯೋಗಳನ್ನು ಶೇರ್​ ಮಾಡಬಹುದಾಗಿದೆ.



ಇದಕ್ಕೆ ಸಂಬಂಧಪಟ್ಟ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿರುವ ಮದ್ರಾಸ್​ ಹೈಕೋರ್ಟ್​, ಟಿಕ್​ ಟಾಕ್​ ವಿಡಿಯೋ ಆ್ಯಪ್ ಬಳಸುವ ಮಕ್ಕಳು ಲೈಂಗಿಕತೆಯ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳುವ ಸಾಧ್ಯತೆಯಿದೆ. ಇದರಲ್ಲಿ ಯಾವುದೇ ಫಿಲ್ಟರ್​ ಇಲ್ಲದ ಕಾರಣ ಯಾವ ರೀತಿಯ ವಿಡಿಯೋ ಬೇಕಾದರೂ ಎಫೆಕ್ಟ್ ​ಗಳೊಂದಿಗೆ ಚಿತ್ರೀಕರಿಸಬಹುದು. ಅಪರಿಚಿತರ ಜೊತೆಗೆ ಮಕ್ಕಳು ಬಹುಬೇಗ ಪರಿಚಯ ಮಾಡಿಕೊಳ್ಳಲು ಈ ಆ್ಯಪ್ ​ನಲ್ಲಿ ಅವಕಾಶವಿದೆ. ಇದರಿಂದ ಮುಂದೆ ಮಕ್ಕಳಿಗೆ ತೊಂದರೆಯಾಗಬಹುದು, ಅವರ ಮೇಲೆ ಅಪರಿಚಿತರು ದೌರ್ಜನ್ಯ ನಡೆಸಬಹುದು. ಆದ್ದರಿಂದ ಈ ಆ್ಯಪ್​ ಅನ್ನು ಬ್ಯಾನ್​ ಮಾಡಬೇಕೆಂದು ಕೋರ್ಟ್​ ಹೇಳಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments