Select Your Language

Notifications

webdunia
webdunia
webdunia
webdunia

’ಬಾಹುಬಲಿ 2’ ಬರೋದು ಸ್ವಲ್ಪ ತಡವಾಗಲಿದೆ

’ಬಾಹುಬಲಿ 2’ ಬರೋದು ಸ್ವಲ್ಪ ತಡವಾಗಲಿದೆ
Hyderabad , ಗುರುವಾರ, 5 ಜನವರಿ 2017 (10:29 IST)
ಬಾಹುಬಲಿಯನ್ನು ಕಟ್ಟಪ್ಪ ಯಾಕೆ ಕೊಂದ ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು. ಬಾಹುಬಲಿ: ದಿ ಬಿಗಿನಿಂಗ್ ಚಿತ್ರ ತೆರೆಗೆ ಬರಲು ಮೂರು ವರ್ಷ ಸಮಯ ತೆಗೆದುಕೊಂಡಿತ್ತು. ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿಸಿತು. 
 
ಎಸ್.ಎಸ್ ರಾಜಮೌಳಿ ಅತ್ಯದ್ಭುತ ನಿರ್ದೇಶಕರಾಗಿ ಹೊರಹೊಮ್ಮಿದರು. ಈಗ ಭಾಗ ಎರಡನ್ನು ನಿರೀಕ್ಷಿಸುವಂತಾಗಿದೆ. ಈ ಸಲ ರಾಜಮೌಳಿ ಏನೆಲ್ಲಾ ವಿಶೇಷಗಳನ್ನು, ತಂತ್ರಜ್ಞಾನವನ್ನು ಬಳಸಿದ್ದಾರೋ ಎಂಬ ಕುತೂಹಲ ಇದೆ. ಈ ಕುತೂಹಲಕ್ಕೆ ತೆರೆಬೀಳಲು ಇನ್ನಷ್ಟು ಸಮಯ ಬೇಕು. 
 
ಕಳೆದ ವರ್ಷ 2016ರ ಕ್ರಿಸ್ಮಸ್‌ಗೆ ತೆರೆಕಾಣಬೇಕಿತ್ತು ಬಾಹುಬಲಿ 2. ಆದರೆ ಪ್ಯಾಚ್‌ವರ್ಕ್ ಇರುವ ಕಾರಣ ಈ ವರ್ಷ ಏಪ್ರಿಲ್‌ಗೆ ತೆರೆಕಾಣಲಿದೆಯಂತೆ. ಇನ್ನೂ ಕೆಲವು ದೃಶ್ಯಗಳನ್ನು ಶೂಟ್ ಮಾಡಬೇಕಾಗಿದೆಯಂತೆ ಹಾಗಾಗಿ ತೆರೆಗೆ ಬರಲು ತಡವಾಗುತ್ತಿದೆ ಎನ್ನುತ್ತಿವೆ ಟಾಲಿವುಡ್ ಮೂಲಗಳು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಆಕಾಶ ಮಾರ್ಗದಲ್ಲಿ ಓಡಾಡಲಿದೆ ಡ್ರೋನ್ ಕಾರು