Select Your Language

Notifications

webdunia
webdunia
webdunia
webdunia

ಆರ್‌ಬಿಐ ಗವರ್ನರ್ ಸ್ಥಾನಕ್ಕೆ ಅರವಿಂದ್ ಪನಾಗರಿಯಾ ನೇಮಕ ಬಹುತೇಕ ಖಚಿತ

ಆರ್‌ಬಿಐ ಗವರ್ನರ್ ಸ್ಥಾನಕ್ಕೆ ಅರವಿಂದ್ ಪನಾಗರಿಯಾ ನೇಮಕ ಬಹುತೇಕ ಖಚಿತ
ನವದೆಹಲಿ , ಸೋಮವಾರ, 11 ಜುಲೈ 2016 (20:12 IST)
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆರ್ಥಿಕ ಸಲಹೆಗಾರರಾದ ಅರವಿಂದ್ ಪನಗರಿಯಾ ಭಾರತೀಯ ರಿಸರ್ವ್ ಬ್ಯಾಂಕ್ ‌ನ ಮುಂದಿನ ಗವರ್ನರ್ ಸ್ಥಾನಕ್ಕೆ ಏರುವುದು ಬಹುತೇಕ ಖಚಿತ ಎಂದು ಮೂಲಗಳು ತಿಳಿಸಿವೆ.
 
ರಘುರಾಮ್ ರಾಜನ್ ಸೆಪ್ಟೆಂಬರ್‌ನಲ್ಲಿ ನಿವೃತ್ತಿಯಾಗಲಿರುವ ಹಿನ್ನೆಲೆಯಲ್ಲಿ ಅವರ ತೆರವಾದ ಸ್ಥಾನಕ್ಕೆ ಅರವಿಂದ್ ಪನಾಗರಿಯಾ ನೇಮಕಗೊಳ್ಳಲಿದ್ದಾರೆ ಎನ್ನಲಾಗಿದೆ.ಪ್ರಧಾನಿ ಮೋದಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಮರಳಿದ ನಂತರ ನೂತನ ಆರ್‌ಬಿಐ ಗವರ್ನರ್‌ರನ್ನು ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  
 
ಏತನ್ಮಧ್ಯೆ ಪ್ರಧಾನಮಂತ್ರಿ ಕಚೇರಿ ಮತ್ತು ಪನಗಾರಿಯಾ ಕಚೇರಿಗಳು ನೇಮಕಾತಿ ಕುರಿತಂತೆ ಯಾವುದೇ ಹೇಳಿಕೆ ನೀಡಲು ನಿರಾಕರಿಸಿವೆ. ಆದರೆ, ಮಾಧ್ಯಮಗಳ ಪ್ರಕಾರ ಮುಂದಿನ 48 ಗಂಟೆಗಳಲ್ಲಿ ನೇಮಕಾತಿ ಆದೇಶ ಹೊರಬೀಳಲಿದೆ ಎಂದು ಮೂಲಗಳು ತಿಳಿಸಿವೆ.
 
ಅರವಿಂದ್ ಪನಗಾರಿಯಾ ಇಂಡೋ-ಅಮೆರಿಕನ್ ಆರ್ಥಿಕತಜ್ಞರಾಗಿದ್ದು, ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಆರ್ಥಶಾಸ್ತ್ರದ ಪ್ರೊಫೆಸರ್ ಆಗಿ ಕಾರ್ಯನಿರ್ವಹಹಿಸಿದ್ದಾರೆ. ಏಷ್ಯನ್ ಡೆವಲೆಪ್‌ಮೆಂಟ್ ಬ್ಯಾಂಕ್‌ನಲ್ಲಿ ಮುಖ್ಯ ಆರ್ಥಿಕ ತಜ್ಞರಾಗಿ ಸೇವೆ ಸಲ್ಲಿಸಿದ್ದಾರೆ.
 
ರಘುರಾಮ್ ರಾಜನ್ ಅವರ ಮೂರು ವರ್ಷಗಳ ಅವಧಿ ಸೆಪ್ಟೆಂಬರ್ 4 ಕ್ಕೆ ಅಂತ್ಯಗೊಳ್ಳಲಿದೆ. ಎರಡನೇ ಬಾರಿಗೆ ಮತ್ತೆ ಅಧಿಕಾರವಹಿಸಿಕೊಳ್ಳಲು ಬಯಸುವುದಿಲ್ಲ ಎಂದು ರಘುರಾಮ್ ರಾಜನ್ ಸ್ಪಷ್ಟಪಡಿಸಿದ್ದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪಟೇದಾರ್ ಹೋರಾಟ ಸಮಿತಿಯ ಮುಖ್ಯಸ್ಥ ಹಾರ್ದಿಕ್ ಪಟೇಲ್‌ಗೆ ಜಾಮೀನು