Select Your Language

Notifications

webdunia
webdunia
webdunia
webdunia

ಪಟೇದಾರ್ ಹೋರಾಟ ಸಮಿತಿಯ ಮುಖ್ಯಸ್ಥ ಹಾರ್ದಿಕ್ ಪಟೇಲ್‌ಗೆ ಜಾಮೀನು

ಪಟೇದಾರ್ ಹೋರಾಟ ಸಮಿತಿಯ ಮುಖ್ಯಸ್ಥ ಹಾರ್ದಿಕ್ ಪಟೇಲ್‌ಗೆ ಜಾಮೀನು
ಗಾಂಧಿನಗರ್ , ಸೋಮವಾರ, 11 ಜುಲೈ 2016 (20:00 IST)
ಪಟೇದಾರ್ ಅನಾಮತ್ ಅಂದೋಲನ ಸಮಿತಿಯ ಮುಖ್ಯಸ್ಥ ಹಾರ್ದಿಕ್ ಪಟೇಲ್‌ಗೆ ಗುಜರಾತ್ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
 
ಹಾರ್ದಿಕ್ ಪಟೇಲ್‌ಗೆ ಷರತ್ತುಬದ್ಧ ಜಾಮೀನು ನೀಡಿದ ಕೋರ್ಟ್, ಒಂಬತ್ತು ತಿಂಗಳುಗಳವರೆಗೆ ಮೆಹಸಾನಾ ಜಿಲ್ಲೆಯನ್ನು ಪ್ರವೇಶಿಸಬಾರದು. ಸುಮಾರು ಆರು ತಿಂಗಳುಗಳ ನಂತರ ಗಡಿಪಾರು ಕುರಿತಂತೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಬಹುದಾಗಿದೆ ಎಂದು ಕೋರ್ಟ್ ಆದೇಶಿಸಿದೆ.
 
ಪಟೇದಾರ್ ಅನಾಮತ್ ಅಂದೋಲನ ಸಮಿತಿ ಆಯೋಜಿಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಹಾರ್ದಿಕ್ ಪಟೇಲ್ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಲಾಗಿತ್ತು. ಇದೀಗ ದೇಶದ್ರೋಹ ಪ್ರಕರಣದಲ್ಲಿ ಹಾರ್ದಿಕ್‌ಗೆ ಜಾಮೀನು ದೊರೆತಿದೆ.
 
ಗುಜರಾಜ್ ರಾಜ್ಯವನ್ನು ಸುಮಾರು ತಿಂಗಳುಗಳವರೆಗೆ ಪ್ರವೇಶಿಸಬಾರದು ಎಂದು ಕೋರ್ಟ್ ಆದೇಶ ನೀಡಿದ್ದರೂ ಮತ್ತೊಂದು ಪ್ರಕರಣ ನೆನೆಗುದಿಯಲ್ಲಿರುವುದರಿಂದ ಜೈಲಿನಲ್ಲಿಯೇ ಕಾಲ ಕಳೆಯ ಬೇಕಾಗುತ್ತದೆ ಎಂದು ಪಟೇದಾರ್ ಸಮಿತಿಯ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಶ್ಮಿರದಲ್ಲಿ ಶಾಂತಿಗಾಗಿ ಬದ್ಧ, ಆದ್ರೆ ಸಿಎಂ ಮುಫ್ತಿ ನಾಯಕತ್ವ ವಹಿಸಿಕೊಳ್ಳಲಿ: ಓಮರ್