Select Your Language

Notifications

webdunia
webdunia
webdunia
webdunia

ಮಾರುಕಟ್ಟೆಗೆ ಬರಲಿದೆ ಕೃತಕ ಕಿಡ್ನಿ

ಮಾರುಕಟ್ಟೆಗೆ ಬರಲಿದೆ ಕೃತಕ ಕಿಡ್ನಿ
ಸ್ಯಾನ್‌ಫ್ರಾನ್ಸಿಸ್ಕೋ , ಶನಿವಾರ, 28 ಜನವರಿ 2017 (12:21 IST)
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಿಗೆ, ಡಯಾಲಿಸಿಸ್‌ನಿಂದ ಕಷ್ಟಪಡುತ್ತಿರುವವರಿಗೆ ಒಂದು ಸಿಹಿಸುದ್ದಿ ಇದೆ. ಅಮೇರಿಕದ ಸ್ಯಾನ್‌ಫ್ರಾನ್ಸಿಸ್ಕೋ ವಿಶ್ವವಿದ್ಯಾಲಯದ ಸಂಶೋಧಕರು ಕೃತಕ ಕಿಡ್ನಿಯನ್ನು ಆವಿಷ್ಕರಿಸಿದ್ದು, ಈ ದಶಕದ ಕೊನೆಯಲ್ಲಿ ಇದು ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ. 

ಸಾಮಾನ್ಯ ಕಿಡ್ನಿಯಂತೆ ಇದು ಎಂದು ಕಾರ್ಯನಿರ್ವಹಿಸಲಿದೆ. ಕೃತಕ ಕಿಡ್ನಿಯನ್ನು ಪರೀಕ್ಷೆಗೊಳಪಡಿಸಿ, ಸುರಕ್ಷತೆಯ ಅಂಶಗಳ ಕುರಿತು ದೃಢಪಟ್ಟ ಬಳಿಕ ವೈದ್ಯ ಜಗತ್ತಿಗ ಪರಿಚಯಿಸಲಾಗುವುದು ಎಂದು ಸಂಶೋಧನಾ ತಂಡದ ಸದಸ್ಯೆ ಡಾ.ಶುವೋ ರಾಯ್ ಹೇಳಿದ್ದಾರೆ. 
 
ಭಾರತದಲ್ಲಿ ಕಿಡ್ನಿಗೆ ಸಂಬಂಧಿಸಿದ ಕಾಯಿಲೆಗಳಿಂದ ಪ್ರತಿವರ್ಷ ಸುಮಾರು 2.5 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಇಂತವರಲ್ಲಿ ಹೆಚ್ಚಿನವರು ಡಯಾಬಿಟೀಸ್ ಮತ್ತು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದಾಗಿ ಕಿಡ್ನಿ ವೈಫಲ್ಯಕ್ಕೊಳಗಾಗಿ ಕೊನೆಯುಸಿರೆಳೆಯುತ್ತಾರೆ. 
 
ಕೃತಕ ಕಿಡ್ನಿ (ವಿಡಿಯೋ)

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ವಿಮಾನದಲ್ಲಿ ಮರಳಲಿದ್ದಾರೆ ಯಡ್ಡಿ-ಈಶು!