Arecanut price today: ಅಡಿಕೆ, ಕಾಳುಮೆಣಸು ಇಂದಿನ ದರ ಹೀಗಿದೆ ನೋಡಿ

Krishnaveni K
ಬುಧವಾರ, 19 ಮಾರ್ಚ್ 2025 (11:19 IST)
ಬೆಂಗಳೂರು: ಸತತ ಏರುಗತಿಯಲ್ಲಿದ್ದ ಅಡಿಕೆ ಬೆಲೆ ಕಳೆದ ಒಂದು ವಾರದಿಂದ ಸ್ಥಿರವಾಗಿದೆ. ಇಂದು ಮಾರುಕಟ್ಟೆಯಲ್ಲಿ ಅಡಿಕೆ, ಕಾಳುಮೆಣಸು ಮತ್ತು ಕೊಬ್ಬರಿ ಬೆಲೆ ಎಷ್ಟಾಗಿದೆ ಎಂಬ ವಿವರ ಇಲ್ಲಿದೆ.

ರಾಜ್ಯದಲ್ಲಿ ಅಡಿಕೆ ಮತ್ತು ಕಾಳುಮೆಣಸು ಬೆಲೆಯಲ್ಲಿ ಪ್ರತಿನಿತ್ಯ 5-10 ರೂ.ಗಳಷ್ಟು ಏರಿಕೆಯಾಗುತ್ತಲೇ ಇತ್ತು. ಆದರೆ ಕಳೆದ ಒಂದು ವಾರದಿಂದ ಬೆಲೆ ನಿಂತಲ್ಲೇ ನಿಂತಿದೆ. ಹಾಗಂತ ಇಳಿಕೆಯೂ ಆಗಿಲ್ಲ ಎನ್ನುವುದು ಗಮನಾರ್ಹ. ಇಂದಿನ ಮಾರುಕಟ್ಟೆ ದರ ಹೇಗಿದೆ ಇಲ್ಲಿದೆ ವಿವರ.

ಹೊಸ ಅಡಿಕೆಗೆ ನಿನ್ನೆ ಮಾರುಕಟ್ಟೆಯಲ್ಲಿ ಪ್ರತೀ ಕೆ.ಜಿ.ಗೆ ಗರಿಷ್ಠ 400 ರೂ.ಗಳಷ್ಟಿತ್ತು. ಇದು ಇಂದೂ ಮುಂದುವರಿದಿದೆ. ಫ್ರೆಶ್ ಚೋಲ್ ಅಡಿಕೆಗೆ ಗರಿಷ್ಠ 455 ರಷ್ಟಿತ್ತು. ಅದೀಗ 460 ರೂ.ಗೆ ತಲುಪಿದೆ. ಡಬಲ್ ಚೋಲ್ ಅಡಿಕೆಗೆ 495 ರೂ.ಗಳಷ್ಟು ದರವಿತ್ತು. ಇಂದೂ ಅದೇ ದರ ಮುಂದುವರಿದಿದೆ. ಇಂದಿನ ಮಾರುಕಟ್ಟೆ ಪ್ರಕಾರ ಈ ದರಗಳಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

ಕಾಳುಮೆಣಸು ದರ
ಕಾಳುಮೆಣಸಿನ ಬೆಲೆಯಲ್ಲೂ ಯಾವುದೇ ಹೆಚ್ಚು-ಕಡಿಮೆಯಾಗಿಲ್ಲ. ಕಳೆದ ಒಂದು ವಾರದಿಂದ ಯಥಾಸ್ಥಿತಿಯಲ್ಲಿದೆ. ಕಾಳುಮೆಣಸಿಗೆ ನಿನ್ನೆ ಗರಿಷ್ಠ 680 ರೂ.ಗಳಷ್ಟಿತ್ತು. ಕಳೆದ ಕೆಲವು ದಿನಗಳಿಂದ ಇದೇ ಬೆಲೆಯಿದೆ. ಇಂದು ಕೂಡಾ ಅದೇ ದರ ಮುಂದುವರಿದಿದೆ. ಇನ್ನು, ಒಣಕೊಬ್ಬರಿ ಬೆಲೆ ನಿನ್ನೆ ಗರಿಷ್ಠ 150 ರೂ.ಗಳಷ್ಟಿದೆ. ಇದರ ಬೆಲೆಯಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಧರ್ಮಸ್ಥಳ ಬುರುಡೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ

ಮಹದೇವಪ್ಪರನ್ನು ಭೇಟಿಯಾಗಿ ನವೆಂಬರ್ ಕ್ರಾಂತಿ ಬಗ್ಗೆ ಪರಮೇಶ್ವರ್ ಸ್ಫೋಟಕ ಹೇಳಿಕೆ

Rain Alert, ದೇಶದ ಈ ಭಾಗಕ್ಕೆ ಚಂಡಮಾರುತ ಅಪ್ಪಳಿಸುವ ಮುನ್ಸೂಚನೆ

ಬಿಹಾರದಲ್ಲೂ ಇಂಡಿಯಾ ಒಕ್ಕೂಟದ ಫ್ರೀ ಗ್ಯಾರಂಟಿ ಆಫರ್

ಆರ್ ಎಸ್ಎಸ್ ವಿರುದ್ಧ ಸರ್ಕಾರದ ಕುತಂತ್ರಕ್ಕೆ ತಕ್ಕ ಉತ್ತರ ಸಿಕ್ಕಿದೆ: ಬಿವೈ ವಿಜಯೇಂದ್ರ

ಮುಂದಿನ ಸುದ್ದಿ
Show comments