Daily Horoscope

Select Your Language

Notifications

webdunia
webdunia
webdunia
webdunia

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ

Arecanut Price Today
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಇಳಿಕೆಯಾಗಿತ್ತು. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.

ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಇದು ಬೆಳೆಗಾರರಿಗೆ ಸಮಾಧಾನ ತಂದಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಸತತವಾಗಿ ಬೆಲೆ ಇಳಿಕೆ ಕಂಡುಬರುತ್ತಿದೆ. ಕೆಲವು ವರ್ಗದ ಅಡಿಕೆ ಬೆಲೆಯಲ್ಲಿ ಇಂದು ಮತ್ತೆ ಇಳಿಕೆ ಕಂಡುಬರುತ್ತಿದೆ. ಇಂದು ಹೊಸ ಅಡಿಕೆ ಬೆಲೆ 460 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದು 530 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿಯಲ್ಲಿದ್ದು 530 ರೂ.ಗಳಷ್ಟಾಗಿದೆ.

ಹೊಸ ಪಟೋರ  ದರ ಮತ್ತು ಹಳೆ ಪಟೋರ ದರದಲ್ಲಿ ಇಂದು ಯಥಾಸ್ಥಿತಿಯಲ್ಲಿದೆ. ಹೊಸ ಪಟೋರ 390 ರೂ. ಗಳಷ್ಟಿದ್ದರೆ ಹಳೇ ಪಟೋರ ದರ 410 ರೂ.ಗಳಷ್ಟಿದೆ.  ಹೊಸ ಉಳ್ಳಿ ದರ ಇಂದು  290 ರೂ. ಗಳಷ್ಟಿದ್ದರೆ ಹಳೆ ಉಳ್ಳಿ ದರವೂ 290 ರೂ.ಗಳಾಗಿದೆ.

ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಇಂದು ಯಥಾಸ್ಥಿತಿಯಲ್ಲಿದ್ದು 665 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಇಂದು ಯಥಾಸ್ಥಿತಿಯಲ್ಲಿದ್ದು 180 ರೂ.ಗಳಷ್ಟಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

Gold Price today: ಚಿನ್ನದ ದರ ಇಂದು ಎಷ್ಟಾಗಿದೆ ನೋಡಿ