Publish Date: Thu, 05 Mar 2026 (12:21 IST)
Updated Date: Thu, 05 Mar 2026 (12:22 IST)
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ವಾರದ ಆರಂಭದಲ್ಲೇ ಅಡಿಕೆ ಬೆಲೆ ಕೊಂಚ ಇಳಿಕೆಯಾಗಿತ್ತು. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಇದು ಬೆಳೆಗಾರರಿಗೆ ಸಮಾಧಾನ ತಂದಿತ್ತು. ಆದರೆ ಕಳೆದ ಎರಡು ದಿನಗಳಿಂದ ಸತತವಾಗಿ ಬೆಲೆ ಇಳಿಕೆ ಕಂಡುಬರುತ್ತಿದೆ. ಇಂದು ಕೆಲವು ವರ್ಗದ ಅಡಿಕೆ ಬೆಲೆಯಲ್ಲಿ ಇಳಿಕೆಯಾಗಿದ್ದರೆ ಮತ್ತೆ ಕೆಲವು ವರ್ಗದ ಅಡಿಕೆ ಬೆಲೆ ಏರಿಕೆಯಾಗಿದೆ. ಇಂದು ಹೊಸ ಅಡಿಕೆ ಬೆಲೆ 5 ರೂ. ಇಳಿಕೆಯಾಗಿದ್ದು 470 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದು 530 ರೂ. ಗಳಾಗಿದೆ. ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿಯಲ್ಲಿದ್ದು 530 ರೂ.ಗಳಷ್ಟಾಗಿದೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರದಲ್ಲಿ ಇಂದು ಯಾವುದೇ ಏರಿಕೆ, ಇಳಿಕೆಯಾಗಿಲ್ಲ. ಹೊಸ ಪಟೋರ 5 ರೂ. ಇಳಿಕೆಯಾಗಿದ್ದು 410 ರೂ. ಗಳಷ್ಟಿದ್ದರೆ ಹಳೇ ಪಟೋರ ದರ 10 ರೂ. ಇಳಿಕೆಯಾಗಿದ್ದು 420 ರೂ.ಗಳಷ್ಟಿದೆ. ಹೊಸ ಉಳ್ಳಿ ದರ ಇಂದು ಯಥಾಸ್ಥಿತಿಯಲ್ಲಿದ್ದು 300 ರೂ. ಗಳಷ್ಟಿದ್ದರೆ ಹಳೆ ಉಳ್ಳಿ ದರ 305 ರೂ.ಗಳಾಗಿದೆ.
ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಇಂದು ಯಥಾಸ್ಥಿತಿಯಲ್ಲಿದ್ದು 660 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಇಂದು 5 ರೂ. ಇಳಿಕೆಯಾಗಿದ್ದು 185 ರೂ.ಗಳಷ್ಟಾಗಿದೆ.