Daily Horoscope

Select Your Language

Notifications

webdunia
webdunia
webdunia
webdunia

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

Arecanut Price today
ಬೆಂಗಳೂರು: ಅಡಿಕೆ ಬೆಲೆ ಕಳೆದ ವಾರ ಏರಿಕೆ-ಇಳಿಕೆಯಾಗಿತ್ತು. ಆದರೆ ಇದೀಗ ಅಡಿಕೆ ದರ ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.

ಕಳೆದ ವಾರ ಅಡಿಕೆ ಬೆಲೆಯಲ್ಲಿ ಏರಿಕೆ ಆರಂಭವಾಗಿತ್ತು. ಸತತವಾಗಿ ನಾಲ್ಕು ದಿನಗಳ ಕಾಲ ಏರಿಕೆಯಾಗಿದ್ದು ರೈತರ ಸಂತಸಕ್ಕೆ ಕಾರಣವಾಗಿತ್ತು. ಆದರೆ ಇಂದು ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ. ಇಂದು ಹೊಸ ಅಡಿಕೆ ಬೆಲೆ 460 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದು  535 ರೂ. ಗಳಾಗಿತ್ತು. ಇಂದೂ ಅಷ್ಟೇ ಇದೆ. ಡಬಲ್ ಚೋಲ್ ಬೆಲೆಯೂ 535 ರೂ.ಗಳಷ್ಟಾಗಿದೆ.

ಹೊಸ ಪಟೋರ  ದರ ಮತ್ತು ಹಳೆ ಪಟೋರ ದರದಲ್ಲಿ ಯಾವುದೇ ಏರಿಕೆ, ಇಳಿಕೆಯಾಗಿಲ್ಲ. ಹೊಸ ಪಟೋರ ಯಥಾಸ್ಥಿತಿಯಲ್ಲಿದ್ದು 400 ರೂ. ಗಳಷ್ಟಿದ್ದರೆ ಹಳೇ ಪಟೋರ ದರದಲ್ಲೂ ಯಾವುದೇ ವ್ಯತ್ಯಾಸವಾಗಿಲ್ಲ, 420 ರೂ.ಗಳಷ್ಟಿದೆ.  ಹೊಸ ಉಳ್ಳಿ ದರ ಇಂದು  ಯಥಾಸ್ಥಿತಿಯಲ್ಲಿದ್ದು 260 ರೂ. ಗಳಷ್ಟಿದ್ದರೆ ಹಳೆ ಉಳ್ಳಿ ದರ ಯಥಾಸ್ಥಿತಿಯಲ್ಲಿದ್ದು 280 ರೂ.ಗಳಾಗಿದೆ.

ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಇಂದು 3 ರೂ.ಗಳಷ್ಟು ಇಳಿಕೆಯಾಗಿದ್ದು 665 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಇಂದು 220 ರೂ.ಗಳಷ್ಟಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಜೆಟ್ ಬಳಿಕ ಸಿಎಂ ಆಗ್ತೀರಾ ಎಂಬ ಪ್ರಶ್ನೆಗೆ ಡಿಕೆ ಶಿವಕುಮಾರ್ ಶಾಕಿಂಗ್ ಉತ್ತರ