Publish Date: Tue, 23 Dec 2025 (11:53 IST)
Updated Date: Tue, 23 Dec 2025 (11:54 IST)
ಬೆಂಗಳೂರು: ಅಡಿಕೆ ಬೆಲೆ ಒಂದು ವಾರದಿಂದ ಯಥಾಸ್ಥಿತಿಯಲ್ಲಿತ್ತು. ಇಂದೂ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದ್ದರೆ ಕಾಳುಮೆಣಸು ಕೊಂಚ ಏರಿಕೆಯಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ಅಡಿಕೆ ಬೆಲೆ ಏರಿಕೆಯೂ ಅಲ್ಲ ಇಳಿಕೆಯೂ ಇಲ್ಲ ಎನ್ನುವ ಸ್ಥಿತಿಯಲ್ಲಿತ್ತು. ಒಂದೆಡೆ ಬೆಳೆ ಕಡಿಮೆ, ಇನ್ನೊಂದೆಡೆ ಬೆಲೆ ಏರಿಕೆಯಾಗದೇ ಇರುವುದು ರೈತರ ಚಿಂತೆಗೆ ಕಾರಣವಾಗಿದೆ. ಅಡಿಕೆ ಬೆಲೆ ಇಳಿಕೆಯಾಗುತ್ತಿದೆಯೇ ಹೊರತು ಏರಿಕೆಯಾಗುತ್ತಿಲ್ಲ ಎಂಬ ಚಿಂತೆ ಬೆಳೆಗಾರರದ್ದು. ಇಂದು ಹೊಸ ಅಡಿಕೆ ಬೆಲೆ 415 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ 520 ರೂ. ಗಳಷ್ಟಿದೆ. ಆದರೆ ಡಬಲ್ ಚೋಲ್ ಬೆಲೆ ಯಥಾಸ್ಥಿತಿಯಲ್ಲಿದ್ದು 530 ರೂ.ಗಳಷ್ಟಾಗಿದೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರದಲ್ಲೂ ಇಂದು ಯಥಾಸ್ಥಿತಿಯಲ್ಲಿದೆ. ಹೊಸ ಪಟೋರ ದರ 350 ರೂ. ಗಳಷ್ಟಿದ್ದರೆ ಹಳೇ ಪಟೋರ ದರ 390 ರೂ.ಗಳಷ್ಟಿದೆ. ಹೊಸ ಉಳ್ಳಿ ದರ ಇಂದು ಯಥಾಸ್ಥಿತಿಯಲ್ಲಿದ್ದು 230 ರೂ. ಗಳಷ್ಟಿದ್ದರೆ ಹಳೆ ಉಳ್ಳಿ ದರ 260 ರೂ.ಗಳಾಗಿದೆ.
ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಇಂದು 5 ರೂ. ಮತ್ತೆ ಏರಿಕೆಯಾಗಿದ್ದು 675 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಇಂದು 225 ರೂ.ಗಳಷ್ಟಾಗಿದೆ.