ಬೆಂಗಳೂರು: ಅಡಿಕೆ ಬೆಲೆ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು. ಆದರೆ ಇಂದು ಅಡಿಕೆ ಮತ್ತು ಕಾಳುಮೆಣಸು ದರವೂ ಏರಿಕೆಯಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ಅಡಿಕೆ ಬೆಲೆ ಏರಿಕೆಯೂ ಅಲ್ಲ ಇಳಿಕೆಯೂ ಇಲ್ಲ ಎನ್ನುವ ಸ್ಥಿತಿಯ್ಲಿತ್ತು. ಒಂದೆಡೆ ಬೆಳೆ ಕಡಿಮೆ, ಇನ್ನೊಂದೆಡೆ ಬೆಲೆ ಏರಿಕೆಯಾಗದೇ ಇರುವುದು ರೈತರ ಚಿಂತೆಗೆ ಕಾರಣವಾಗಿತ್ತು. ಆದರೆ ಇಂದು ಅಡಿಕೆ ಬೆಲೆ ದಿಡೀರ್ ಏರಿಕೆಯಾಗಿದೆ. ಹೊಸ ಅಡಿಕೆ ಬೆಲೆ 10 ರೂ. ಏರಿಕೆಯಾಗಿ 410 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಮಾತ್ರ ಯಥಾಸ್ಥಿತಿಯಲ್ಲಿದ್ದು ಇಂದು 530 ರೂ. ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆ ಯಥಾಸ್ಥಿತಿಯಲ್ಲಿದ್ದು 540 ರೂ.ಗಳಷ್ಟಾಗಿದೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರದಲ್ಲೂ ಕೊಂಚ ಏರಿಕೆಯಾಗಿದೆ. ಹೊಸ ಪಟೋರ ದರ 10 ರೂ. ಏರಿಕೆಯಾಗಿ 340 ರೂ. ಗಳಷ್ಟಿದ್ದರೆ ಹಳೇ ಪಟೋರ ದರ 5 ರೂ. ಏರಿಕೆಯಾಗಿ 415 ರೂ.ಗಳಷ್ಟಿದೆ. ಹೊಸ ಉಳ್ಳಿ ದರ ಇಂದೂ 225 ರೂ. ಗಳಷ್ಟಿದ್ದರೆ ಹಳೆ ಉಳ್ಳಿ ದರವೂ ಯಥಾಸ್ಥಿತಿಯಲ್ಲಿದ್ದು 270 ರೂ.ಗಳಾಗಿದೆ.
ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಇಂದು 5 ರೂ. ಏರಿಕೆಯಾಗಿದ್ದು 675 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಇಂದು 10 ರೂ. ಇಳಿಕೆಯಾಗಿದ್ದು 235 ರೂ.ಗಳಷ್ಟಾಗಿದೆ.