Publish Date: Fri, 26 Sep 2025 (11:11 IST)
Updated Date: Fri, 26 Sep 2025 (11:13 IST)
ಬೆಂಗಳೂರು: ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆಯಲ್ಲಿ ಕೊಂಚವೂ ವ್ಯತ್ಯಾಸವಾಗಿಲ್ಲ ಕಾಳುಮೆಣಸು ಬೆಲೆ ಇಳಿಕೆಯಾದರೆ ಮತ್ತು ಕೊಬ್ಬರಿ ಬೆಲೆ ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ಕೆಲವು ದಿನಗಳ ಹಿಂದೆ ಅಡಿಕೆ ಬೆಲೆ ಕೊಂಚ ಏರಿಕೆ ಕಂಡು ಬೆಳೆಗಾರರಿಗೆ ನೆಮ್ಮದಿ ತಂದಿತ್ತು. ಆದರೆ ಈಗ ಕೆಲವು ದಿನಗಳಿಂದ ಮತ್ತೆ ಯಥಾ ಸ್ಥಿತಿಯಲ್ಲಿದೆ. ಹೊಸ ಅಡಿಕೆ ಬೆಲೆ 490 ರೂ.ಗಳಷ್ಟಾಗಿತ್ತು. ಇಂದೂ ಅದೇ ಬೆಲೆಯಿದೆ. ಹಳೆ ಅಡಿಕೆ ಬೆಲೆ 530 ರೂ.ಗಳಷ್ಟಾಗಿತ್ತು. ಇಂದೂ ಅದೇ ಬೆಲೆಯಿದೆ. ಇನ್ನು ಡಬಲ್ ಚೋಲ್ ಬೆಲೆಯೂ 530 ರೂ.ಗಳಷ್ಟೇ ಇದೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರದಲ್ಲೂ ಯಾವುದೇ ಏರಿಕೆ ಅಥವಾ ಇಳಿಕೆಯಿಲ್ಲ. ಇವೆರಡರ ದರ 370 ರೂ. ಗಳಷ್ಟೇ ಇದೆ. ಹೊಸ ಉಳ್ಳಿ ದರದಲ್ಲಿ ವ್ಯತ್ಯಾಸವಾಗಿಲ್ಲ. ಇಂದೂ ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 225 ರೂ.ಗಳಾಗಿದೆ. ಹೊಸ ಕೋಕ ಮತ್ತು ಹಳೆ ಕೋಕ ದರ ಯಥಾಸ್ಥಿತಿಯಲ್ಲಿದ್ದು ಇಂದು ದರ 280 ರೂ.ಗೆ ಬಂದು ತಲುಪಿದೆ.
ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಬೆಲೆ ಕಳೆದ ಯಥಾಸ್ಥಿತಿಯಲ್ಲಿತ್ತು. ಆದರೆ ಇಂದು 10 ರೂ. ಇಳಿಕೆಯಾಗಿದ್ದು 650 ರೂ.ಗಳಷ್ಟಾಗಿದೆ. ಒಣ ಕೊಬ್ಬರಿ ಬೆಲೆ ಯಥಾಸ್ಥಿತಿಯಲ್ಲಿದ್ದು 255 ರೂ.ಗಳಷ್ಟಾಗಿದೆ.