Publish Date: Thu, 21 Aug 2025 (12:00 IST)
Updated Date: Thu, 21 Aug 2025 (12:02 IST)
ಬೆಂಗಳೂರು: ಅಡಿಕೆ ಬೆಲೆ ಮಾತ್ರ ಏರಿಕೆಯಾಗುವ ಲಕ್ಷಣವೇ ಕಂಡುಬರುತ್ತಿಲ್ಲ. ಅತ್ತ ಕಾಳುಮೆಣಸು ಬೆಲೆ ಯಥಾಸ್ಥಿತಿಯಲ್ಲಿದ್ದರೆ ಕೊಬ್ಬರಿ ಬೆಲೆ ಮಾತ್ರ ಮತ್ತೆ ಕೊಂಚ ಏರಿಕೆಯಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆ ಹೆಚ್ಚೂ ಇಲ್ಲ ಕಡಿಮೆಯೂ ಇಲ್ಲ ಎಂಬಂತಾಗಿತ್ತು. ವಿಪರೀತ ಮಳೆಯಿಂದ ಕೊಳೆ ರೋಗದ ನಡುವೆ ಬೆಲೆ ಏರಿಕೆಯಾಗದೇ ಇರುವುದು ರೈತರ ಚಿಂತೆಗೆ ಕಾರಣವಾಗಿದೆ. ಹೊಸ ಅಡಿಕೆ ಬೆಲೆ ಕೆಲವು ದಿನಗಳಿಂದ 485 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಹಲವು ದಿನಗಳಿಂಧ ಯಥಾ ಸ್ಥಿತಿಯಲ್ಲಿದೆ. ಹಳೆ ಅಡಿಕೆ ಬೆಲೆ ಇಂದೂ ಗರಿಷ್ಠ 525 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 525 ರೂ.ಗಳಾಗಿವೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರದಲ್ಲೂ ಯಾವುದೇ ಏರಿಕೆ ಅಥವಾ ಇಳಿಕೆಯಿಲ್ಲ. ಇವೆರಡರ ದರ 370 ರೂ. ಗಳಷ್ಟೇ ಇದೆ. ಹೊಸ ಉಳ್ಳಿ ದರದಲ್ಲಿ ವ್ಯತ್ಯಾಸವಾಗಿಲ್ಲ. ಇಂದೂ ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 225 ರೂ.ಗಳಾಗಿದೆ. ಹೊಸ ಕೋಕ ಮತ್ತು ಹಳೆ ಕೋಕ ದರದಲ್ಲಿ ಮೊನ್ನೆ 5 ರೂ. ಏರಿಕೆಯಾಗಿತ್ತು. ಈಗ ಯಥಾಸ್ಥಿತಿಯಲ್ಲಿದ್ದು ಇಂದು ದರ 280 ರೂ.ಗೆ ಬಂದು ತಲುಪಿದೆ.
ಕಾಳುಮೆಣಸು, ಕೊಬ್ಬರಿ ದರ
ಕಾಳುಮೆಣಸು ಬೆಲೆಯಲ್ಲಿ ಮೊನ್ನೆ ಕೊಂಚ ಏರಿಕೆಯಾಗಿತ್ತು. ಇಂದು ಕಾಳುಮೆಣಸು ಬೆಲೆ ಯಥಾಸ್ಥಿತಿಯಲ್ಲಿದ್ದು 665 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಇಂದು ಯಥಾಸ್ಥಿತಿಯಲ್ಲಿದ್ದು 240 ರೂ.ಗಳಷ್ಟಾಗಿದೆ.