ಬೆಂಗಳೂರು: ಅಡಿಕೆ ಬೆಳೆಗಾರರಿಗೆ ಇಂದೂ ನಿರಾಸೆಯಾಗಿದ್ದು ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಅತ್ತ ಕಾಳುಮೆಣಸು ಬೆಲೆ ಏರಿಕೆಯಾದರೆ, ಕೊಬ್ಬರಿ ಬೆಲೆಯೂ ಇಳಿಕೆಯಾಗಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು, ಕೊಬ್ಬರಿ ದರ ಹೇಗಿದೆ ಇಲ್ಲಿದೆ ವಿವರ.
ಕಳೆದ ಕೆಲವು ದಿನಗಳಿಂದ ಅಡಿಕೆ ಬೆಲೆ ಹೆಚ್ಚೂ ಇಲ್ಲ ಕಡಿಮೆಯೂ ಇಲ್ಲ ಎಂಬಂತಾಗಿತ್ತು. ವಿಪರೀತ ಮಳೆಯಿಂದ ಕೊಳೆ ರೋಗದ ನಡುವೆ ಬೆಲೆ ಏರಿಕೆಯಾಗದೇ ಇರುವುದು ರೈತರ ಚಿಂತೆಗೆ ಕಾರಣವಾಗಿದೆ. ಹೊಸ ಅಡಿಕೆ ಬೆಲೆ ಕೆಲವು ದಿನಗಳಿಂದ 485 ರೂ.ಗಳಷ್ಟಿದೆ. ಹಳೆ ಅಡಿಕೆ ಬೆಲೆ ಹಲವು ದಿನಗಳಿಂಧ ಯಥಾ ಸ್ಥಿತಿಯಲ್ಲಿದೆ. ಹಳೆ ಅಡಿಕೆ ಬೆಲೆ ಇಂದೂ ಗರಿಷ್ಠ 525 ರೂ.ಗಳಷ್ಟಿದೆ. ಇನ್ನು ಡಬಲ್ ಚೋಲ್ ಬೆಲೆಯೂ ಯಥಾಸ್ಥಿತಿ ಕಾಪಾಡಿಕೊಂಡಿದ್ದು 525 ರೂ.ಗಳಾಗಿವೆ.
ಹೊಸ ಪಟೋರ ದರ ಮತ್ತು ಹಳೆ ಪಟೋರ ದರದಲ್ಲೂ ಯಾವುದೇ ಏರಿಕೆ ಅಥವಾ ಇಳಿಕೆಯಿಲ್ಲ. ಇವೆರಡರ ದರ 370 ರೂ. ಗಳಷ್ಟೇ ಇದೆ. ಹೊಸ ಉಳ್ಳಿ ದರದಲ್ಲಿ ವ್ಯತ್ಯಾಸವಾಗಿಲ್ಲ. ಇಂದೂ ಹೊಸ ಉಳ್ಳಿ ಮತ್ತು ಹಳೆ ಉಳ್ಳಿದ ದರ ತಲಾ 225 ರೂ.ಗಳಾಗಿದೆ. ಹೊಸ ಕೋಕ ಮತ್ತು ಹಳೆ ಕೋಕ ದರದಲ್ಲಿ ಮೊನ್ನೆ 5 ರೂ. ಏರಿಕೆಯಾಗಿತ್ತು. ಈಗ ಯಥಾಸ್ಥಿತಿಯಲ್ಲಿದ್ದು ಇಂದು ದರ 280 ರೂ.ಗೆ ಬಂದು ತಲುಪಿದೆ.
ಕಾಳುಮೆಣಸು, ಕೊಬ್ಬರಿ ದರ
ವಿಶೇಷವೆಂದರೆ ಕಾಳುಮೆಣಸು ದರದಲ್ಲೂ ಕಳೆದ ಕೆಲವು ದಿನಗಳಿಂದ ಯಾವುದೇ ವ್ಯತ್ಯಾಸವಾಗಿರಲಿಲ್ಲ. ಇಂದು 5 ರೂ. ಏರಿಕೆಯಾಗಿದ್ದು 655 ರೂ.ಗಳಷ್ಟಿದೆ. ಒಣ ಕೊಬ್ಬರಿ ಬೆಲೆ ಮಾತ್ರ 10 ರೂ. ಇಳಿಕೆಯಾಗಿ 250 ರೂ.ಗಳಷ್ಟಾಗಿದೆ.