Webdunia - Bharat's app for daily news and videos

Install App

Arecanut price today: ಅಡಿಕೆ ಬೆಲೆ ಇಂದು ಎಷ್ಟಾಗಿದೆ ನೋಡಿ

Krishnaveni K
ಸೋಮವಾರ, 12 ಮೇ 2025 (11:20 IST)
ಬೆಂಗಳೂರು: ಬೆಲೆ ಏರಿಕೆಯ ನಿರೀಕ್ಷೆಯಲ್ಲಿರುವ ಅಡಿಕೆ ಬೆಳೆಗಾರರಿಗೆ ನಿರಾಸೆಯಾಗಿದೆ. ಇಂದೂ ಅಡಿಕೆ ಬೆಲೆ ಯಥಾಸ್ಥಿತಿಯಲ್ಲಿದೆ. ಇಂದು ಅಡಿಕೆ ಮತ್ತು ಕಾಳು ಮೆಣಸು ದರ ಹೇಗಿದೆ ಇಲ್ಲಿದೆ ವಿವರ.

ಕಳೆದ ವಾರ ಅಡಿಕೆ ಬೆಲೆಯಲ್ಲಿ ಕೊಂಚ ಏರಿಕೆಯಾಗಿತ್ತು. ಆದರೆ ಮೊನ್ನೆ ಅಡಿಕೆ ಬೆಲೆಯಲ್ಲಿ ಕೊಂಚ ಇಳಿಕೆಯಾಗಿ ರೈತರಿಗೆ ನಿರಾಸೆಯಾಗಿತ್ತು. ಆದರೆ ಇಂದು ಹೊಸ ಅಡಿಕೆ ಮತ್ತು ಹಳೆ ಅಡಿಕೆ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ. ಹೊಸ ಅಡಿಕೆ ಬೆಲೆ 460 ರೂ.ಗಳಷ್ಟಿದ್ದರೆ ಹಳೆ ಅಡಿಕೆ ಬೆಲೆ ಗರಿಷ್ಠ 500 ರೂ.ಗಳಷ್ಟಿದೆ. ಇಂದು ಡಬಲ್ ಚೋಲ್ ಬೆಲೆ ಗರಿಷ್ಠ 510 ರೂ.ಗಳಷ್ಟಿದೆ.

ಪಟೋರ ಮತ್ತು ಇತರೆ ಅಡಿಕೆ ಬೆಲೆಯಲ್ಲಿ ಹೆಚ್ಚು ಕಡಿಮೆಯಾಗಿಲ್ಲ. ಹೊಸ ಫಟೋರ ದರ ಇಂದು 360 ರೂ.ಗಳಷ್ಟಿದೆ. ಹಳೆ ಫಟೋರ ದರ 370 ರೂ. ಗಳಷ್ಟಾಗಿದೆ. ಹೊಸ ಉಳ್ಳಿ ದರ ಕಳೆದ ಕೆಲವು ದಿನಗಳಿಂದ ಯಥಾಸ್ಥಿತಿಯಲ್ಲಿತ್ತು. ಹೊಸ ಉಳ್ಳಿಗೆ ಗರಿಷ್ಠ 250 ರೂ., ಹಳೆ ಉಳ್ಳಿ ದರವೂ 250 ರೂ.ಗೆ ಗಳಷ್ಟಿದೆ. ಹೊಸ ಕೋಕ ದರವೂ ಯಥಾಸ್ಥಿತಿಯ್ಲಿದ್ದು 300 ರೂ.ಆಗಿದೆ. ಹಳೇ ಕೋಕ 300 ರೂ. ಗಳಷ್ಟೇ ಇದೆ.

ಕಾಳುಮೆಣಸು ದರ
ಕಾಳುಮೆಣಸು ಬೆಳೆಗಾರರಿಗೆ ಕಳೆದ ವಾರ ಸತತವಾಗಿ ಬೆಲೆ ಇಳಿಕೆಯಾಗಿ ನಿರಾಸೆಯಾಗಿತ್ತು.  ಇಂದು ಕಾಳುಮೆಣಸು ದರ ಮತ್ತಷ್ಟು ಇಳಿಕೆಯಾಗಿದ್ದು 650 ರೂ.ಗಳಷ್ಟಕ್ಕೆ ತಲುಪಿದೆ. ಇನ್ನು ಒಣಕೊಬ್ಬರಿ ಬಹಳ ದಿನಗಳ ನಂತರ ಏರಿಕೆಯಾಗಿದ್ದು ಗರಿಷ್ಠ 180 ರೂ.ಗಳಷ್ಟಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಉತ್ತರಾಖಂಡದ ಬಾಲಿಗಢದಲ್ಲಿ ಭೀಕರ ಮೇಘಸ್ಫೋಟ: ಪ್ರವಾಹದಲ್ಲಿ ಸಿಲುಕಿ 9 ಕಾರ್ಮಿಕರ ಕಣ್ಮರೆ

ಸಂವಿಧಾನದ ಬಗ್ಗೆ ಆರ್ ಎಸ್ಎಸ್ ನ ದತ್ತಾತ್ರೇಯ ಹೊಸಬಾಳೆ ಮಾತು ಒಪ್ಪಲ್ಲ: ಎಚ್ಎಂ ರೇವಣ್ಣ

ರಮೇಶ್ ಜಾರಕಿಹೊಳಿ ಸಿಡಿ ಮಾಡಿದವರು ಯಾರೆಂದು ಹೇಳಿದ ಬಸನಗೌಡ ಪಾಟೀಲ್ ಯತ್ನಾಳ್

ಹಿಂದುಳಿದ ವರ್ಗಗಳ ಕಡೆಗಣನೆಯಿಂದ ಅಧಿಕಾರ ಕಳಕೊಂಡ ಕಾಂಗ್ರೆಸ್: ಭೂಪೇಂದ್ರ ಯಾದವ್

ಸುಹಾಸ್ ಶೆಟ್ಟಿ ಕೇಸ್: ಹಿಂದೂ ಸಂಘಟನೆಗಳ ಅನುಮಾನ ನಿಜವಾಯ್ತು

ಮುಂದಿನ ಸುದ್ದಿ
Show comments