Select Your Language

Notifications

webdunia
webdunia
webdunia
webdunia

ಆಧುನಿಕ ತಂತ್ರಜ್ಞಾನದ ಎಪ್ರಿಲಿಯಾ ಬೈಕ್ ಮಾರುಕಟ್ಟೆಗೆ

ಆಧುನಿಕ ತಂತ್ರಜ್ಞಾನದ ಎಪ್ರಿಲಿಯಾ ಬೈಕ್ ಮಾರುಕಟ್ಟೆಗೆ
ನವದೆಹಲಿ , ಬುಧವಾರ, 31 ಆಗಸ್ಟ್ 2016 (18:46 IST)
ಪಿಯಾಗ್ಗಿಯೋ ಸಂಸ್ಥೆ, ಕೊನೆಗೂ ಗ್ರಾಹಕರ ಕೈಗೆಟುಕುವ ದರದಲ್ಲಿ ಎಪ್ರಿಲಿಯಾ ಎಸ್‌ಆರ್-150 ಮಾದರಿಯ ಬೈಕ್‌ನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ದೆಹಲಿ ಶೋ ರೂಮ್ ದರ ಹೊರತು ಪಡಿಸಿ ಈ ಆವೃತ್ತಿಯ ಬೈಕ್‌ಗಳು 65 ಸಾವಿರ ರೂಪಾಯಿ ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ. 
 
ಪಿಯಾಗ್ಗಿಯೋ ಮೋಟೋಪ್ಲೆಕ್ಸ್ ಮತ್ತು ವೆಸ್ಪಾ ಡೀಲರ್‌‌ಶಿಪ್ ಮಳಿಗೆಗಳಲ್ಲಿ ಎಪ್ರಿಲಿಯಾ ಮೋಟಾರ್‌ ಬೈಕ್‌ಗಳು ಲಭ್ಯವಿದ್ದು ಗ್ರಾಹಕರು ಕಾಯುವ ಅಗತ್ಯವಿಲ್ಲ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. 
 
ಇಟಾಲಿಯನ್ ಮೂಲದ ಮ್ಯಾನುಫ್ಯಾಕ್ಟರರ್ ಸಂಸ್ಥೆ, ಕಳೆದ ಹಲವು ವಾರಗಳ ಹಿಂದೆಯಷ್ಟೇ ಈ ಆವೃತ್ತಿಯ ಬೈಕ್‌ಗಳ ದರವನ್ನು ಬಹಿರಂಗಪಡಿಸಿತ್ತು. 
 
ಇದರ ಬೆಲೆಯೇ ನಿರ್ಧರಿಸುವಂತೆ, ಈ ಆವೃತ್ತಿಯ ಬೈಕ್‌ಗಳು ವೆಸ್ಪಾ ಆವೃತ್ತಿಯ ಬೈಕ್‌ಗಳಿಗಿಂತ ಕೆಳ ಹಂತದ ಬೈಕ್‌ ಎಂದು ತಿಳಿದು ಬರುತ್ತಿದ್ದು, ಇವು ಹೋಂಡಾ ಆಕ್ಟಿವ್ 125 ಮತ್ತು ಹೊಸ ಆವೃತ್ತಿಯ ಎಕ್ಸ್‌ಸ್ 125 ರೇಂಜ್‌ನ ಬೈಕ್‌ಗಳು ಎಂದು ಹೇಳಲಾಗುತ್ತಿದೆ. 
 
ಎಪ್ರಿಲಿಯಾ ಎಸ್ಆರ್ 150 ಬಹುಶಃ ಸ್ಪೋರ್ಟಿಯಸ್ಟ್ ಬೈಕ್‌ನಂತೆ ಕಾಣುತ್ತಿದೆ. ಈ ಬೈಕ್‌ನ ಬಾಹ್ಯ ವಿನ್ಯಾಸವನ್ನು ಏರೋಡೈನಮಿಕ್ ಮತ್ತು ಮಸೂರಗಳ ತಯಾರಿಕೆಯಲ್ಲಿ ಬಳಸುವಂತಹ ಸಾಮಾಗ್ರಿಗಳಿಂದ ಸಿದ್ಧ ಪಡಿಸಿರುವುದರಿಂದ ಈ ಬೈಕ್ ಅತ್ಯಂತ ಹಗುರವಾಗಿದೆ. 
 
ಈ ಬೈಕ್‌ ಬಾಡಿಯನ್ನು ಏರೋಡೈನಮಿಕ್ ವಸ್ತುಗಳಿಂದ ಸಿದ್ಧಪಡಿಸಿರುವುದರಿಂದ ನಯವಾದ ವಿನ್ಯಾಸವನ್ನು ಹೊಂದಿದ್ದು, ಮಾರುಕಟ್ಟೆಯಲ್ಲಿ ತನ್ನ ಪ್ರತಿಸ್ಪರ್ಧೆಗಳಿಗೆ ತೀವ್ರ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಾವುದೇ ಬ್ಯಾಂಕ್‌ ಎಟಿಎಂನಿಂದ ಮೊಬೈಲ್ ನೋಂದಣಿಗೆ ಅವಕಾಶ: ಆರ್‌ಬಿಐ