Select Your Language

Notifications

webdunia
webdunia
webdunia
webdunia

ಹೊಸ ಐಫೋನ್ 7 ವಿವರಗಳು ಲೀಕ್, ಇನ್ನಷ್ಟು ಹಗುರ

ಆಪೆಲ್ ಇಂಕ್
New Delhi , ಮಂಗಳವಾರ, 7 ಮಾರ್ಚ್ 2017 (12:01 IST)
ಜಗತ್ತಿನಾದ್ಯಂತ ಇರುವ ಐಫೋನ್ ಪ್ರಿಯರಿಗೆ ಸಿಹಿಸುದ್ದಿ. ಆಪೆಲ್ ಕಂಪೆನಿ ಹೊಸದಾಗಿ ಬಿಡುಗಡೆ ಮಾಡಲಿರುವ ಐಫೋನ್ ಮುಂದಿನ ಮಾಡೆಲ್ ವಿವರಗಳು ಮೊದಲ ಬಾರಿಗೆ ಲೀಕ್ ಆಗಿವೆ. ಐಫೋನ್ ಮಾಡೆಲ್ ಹತ್ತು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ 5.8 ಇಂಚಿನ ಒಎಲ್ಇಡಿ ಪರದೆಯೊಂದಿಗೆ ಬರುತ್ತಿರುವ ಹೊಸ ಫೋನ್‌ಗೆ ಐಫೋನ್ ಎಕ್ಸ್ ಎಂದು ಹೆಸರಿಡಲಾಗಿದೆ.
 
ಅಮೆರಿಕಾ ಪ್ರಕಾರ ಈ ಹೊಸ ಐಫೋನ್ ಬೆಲೆ 1000 ಡಾಲರ್ ಇರಬಹುದೆಂದು ಊಹಿಸಲಾಗಿದೆ. ಆಪೆಲ್ ಬಿಡುಗಡೆ ಮಾಡಲಿರುವ ಅತ್ಯಂತ ದುಬಾರಿ ಐಫೋನ್ ಇದೇ ಎಂಬುದು ವಿಶೇಷ. ಇದರ ಜತೆಗೆ ಐಫೋನ್ 7, ಐಫೋನ್ 7 ಪ್ಲಸ್ ಮಾಡೆಲ್‌ಗಳನ್ನೂ ನವೀಕರಿಸಿ ಐಫೋನ್ 7ಎಸ್, ಐಫೋನ್ 7ಎಸ್ ಪ್ಲಸ್ ಹೆಸರಿನಲ್ಲಿ ಬಿಡುಗಡೆ ಮಾಡಲಿದೆ. 
 
ಐಫೋನ್ 7 ಪ್ಲಸ್‌ಗೆ ಹೋಲಿಸಿದರೆ ಐಫೋನ್ 8 ಚಿಕ್ಕದಾಗಿರುತ್ತದೆ. ಐಫೋನ್ 8 ಬೆರಳಚ್ಚು ಮುದ್ರೆ, ವೈರ್‌ಲೆಸ್ ಚಾರ್ಚಿಂಗ್ ಸೌಲಭ್ಯಗಳೊಂದಿಗೆ ಬರುತ್ತಿರುವುದು ವಿಶೇಷ. ಹೊಸ ಆಕ್ಸೆಸರೀಸ್ ಸಹ ಈ ಬಾರಿ ಆಪೆಲ್ ನೀಡಲಿದೆ. 8 ಪಿನ್‌ಗಳ ಅಲ್ಟ್ರಾ ಆಕ್ಸೆಸರಿ ಕನೆಕ್ಟರ್ (ಯುಎಸಿ) ಈಗಿನ ಯುಎಸ್‌ಬಿ-ಸಿಗಿಂತಲೂ ತೆಳುವಾಗಿರುತ್ತದೆ. 5.8 ಇಂಚಿನ ಪರದೆಯಲ್ಲಿ 5.15ರಷ್ಟನು ಮಾತ್ರ ಬಳಸಿಕೊಳ್ಳಬಹುದು ಎನ್ನಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಒನ್‌ಪ್ಲಸ್ ಮೊಬೈಲ್‌ಗೆ ಅಮಿತಾಬ್ ರಾಯಭಾರಿ