Select Your Language

Notifications

webdunia
webdunia
webdunia
webdunia

ಆಂಡ್ರಾಯ್ಡ್ ಸೃಷ್ಟಿಕರ್ತನಿಂದ ಹೈಎಂಡ್ ಫೋನ್

ಆಂಡ್ರಾಯ್ಡ್ ಸೃಷ್ಟಿಕರ್ತನಿಂದ ಹೈಎಂಡ್ ಫೋನ್
New Delhi , ಸೋಮವಾರ, 16 ಜನವರಿ 2017 (09:40 IST)
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಮಂದಿಗೆ ಪರಿಚಯವಾದವರು ಆಂಡಿ ರೂಬಿನ್. ಈಗ ಇನ್ನೊಂದು ಸಂಚಲನ ಸೃಷ್ಟಿಸಲು ರೆಡಿಯಾಗಿದ್ದಾರೆ. ಅತ್ಯಾಧುನಿಕ ಸೌಲಭ್ಯಗಳುಳ್ಳ ಹೈಎಂಡ್ ಸ್ಮಾರ್ಟ್‌ಫೋನ್ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ.
 
ಈ ವರ್ಷದಲ್ಲೇ ಆ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಬಗ್ಗೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ರೂಬಿನ್. ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನ್ನು 2005ರಲ್ಲಿ ಗೂಗಲ್ ಕಂಪನಿಗೆ ಮಾರಿದ್ದರು ರೂಬಿನ್. ಆಗಿನಿಂದಲೂ ಗೂಗಲ್ ಕಂಪನಿಯಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಎರಡು ವರ್ಷಗಳ ಹಿಂದೆ ಅವರು ಕಂಪೆನಿಗೆ ಗುಡ್ ಬೈ ಹೇಳಿದ್ದರು. 
 
ಪ್ಲೇ ಗ್ರೌಂಡ್ ಗ್ಲೋಬಲ್ ಎಂಬ ಸ್ಟಾರ್ಟ್‌ಅಪ್ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ. 2015ರ ನವೆಂಬರ್ ನಲ್ಲಿ ಎಸೆನ್ಸಿಯಲ್ ಪ್ರಾಡಕ್ಟ್ಸ್ ಇನ್‍ಕಾರ್ಪೊರೇಟ್ ಎಂಬ ಮತ್ತೊಂದು ಕಂಪೆನಿಯನ್ನೂ ಹುಟ್ಟುಹಾಕಿದರು. ಇದರಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸಿದ್ದಾರಂತೆ. 
 
ಅವರ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ 40 ಮಂದಿ ನಿಪುಣರಲ್ಲಿ ಬಹುತೇಕರು ಗೂಗಲ್ ಮತ್ತು ಆಪಲ್ ಕಂಪನಿಯಿಂದ ಬಂದವರು. ಆಪಲ್ ಐಫೋನ್, ಗೂಗಲ್ ಪಿಕ್ಸೆಲ್‌ಗೆ ಸ್ಪರ್ಧೆ ಕೊಡುವಂತ ಫೋನ್ ಮಾರುಕಟ್ಟೆಗೆ ಬಿಡುವ ಕೆಲಸಗಳು ಭರದಿಂದ ಸಾಗುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯಾರಿಗೆ ಸಿಗುತ್ತೆ ಸೈಕಲ್? ಅಪ್ಪನಿಗಾ, ಮಗನಿಗಾ?