ಲಗೇಜ್ ಉತ್ಪನ್ನಗಳ ಸಂಸ್ಥೆ ಅಮೆರಿಕನ್ ಟೂರಿಸ್ಟರ್ ತನ್ನ ಪ್ರಚಾರ ರಾಯಭಾರಿಯಾಗಿ ಕ್ರಿಕೆಟರ್ ವಿರಾಟ್ ಕೊಹ್ಲಿಯನ್ನು ನೇಮಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಹೊಸ ಬ್ಯಾಕ್ಪ್ಯಾಕ್ ಕಲೆಕ್ಷನ್ ಬಿಡುಗಡೆ ಮಾಡಿದೆ.
ಭಾರತ, ಯುಎಇ, ಸೌದಿ ಅರೇಬಿಯಾ, ಕುವೈತ್, ಖತಾರ್, ಓಮನ್, ಬಹ್ರೇನ್, ಬಾಂಗ್ಲಾದೇಶ್, ಶ್ರೀಲಂಕಾಗಳಲ್ಲಿ ಕೊಹ್ಲಿ ಮಾರ್ಕೆಟಿಂಗ್ ಪ್ರಚಾರ ಇರುತ್ತದೆ ಎಂದು ತಿಳಿಸಿದೆ. ವಿರಾಟ್ ಗ್ಲೋಬಲ್ ಯೂತ್ ಐಕಾನ್ ಆಗಿರುವ ಕಾರಣ ಅವರನ್ನು ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಂಡಿದ್ದೇವೆ ಎಂದಿದೆ ಕಂಪನಿ.
ಅಮೆರಿಕನ್ ಟೂರಿಸ್ಟರ್ನ ಮೊದಲ ಪ್ರಚಾರ ರಾಯಭಾರಿ ವಿರಾಟ್ ಕೊಹ್ಲಿ ಎಂದಿದ್ದಾರೆ ಸಾಮ್ಸೋನೈಟ್ ದಕ್ಷಿಣ ಏಷ್ಯಾ ಕಾರ್ಯ ನಿರ್ವಹಣಾ ಅಧಿಕಾರಿ ಜೈ ಕೃಷ್ಣನ್. ಈ ಹಿಂದೆ ಪಂಜಾಬ್ ನ್ಯಾಶನಲ್ ಬ್ಯಾಂಕ್, ಗಡಿ ಭದ್ರತಾ ಪಡೆಗೆ ಕೊಹ್ಲಿ ರಾಯಭಾರಿಯಾಗಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.