Select Your Language

Notifications

webdunia
webdunia
webdunia
webdunia

ಅತ್ಯಂತ ಜನಪ್ರಿಯ ಸಿಇಓ ಯಾರು ಗೊತ್ತಾ?

ಅತ್ಯಂತ ಜನಪ್ರಿಯ ಸಿಇಓ ಯಾರು ಗೊತ್ತಾ?
Mumbai , ಭಾನುವಾರ, 18 ಡಿಸೆಂಬರ್ 2016 (06:15 IST)
ಸರ್ಚ್ ಎಂಜಿನ್ ದೈತ್ಯ ಗೂಗಲ್ ಜನನಕ್ಕೆ ಕಾರಣರಾದರಲ್ಲಿ ಒಬ್ಬರಾದ, ಅದರ ಪೇರೆಂಟ್ ಕಂಪನಿ ಆಲ್ಪಾಬೆಟ್ಸ್‌ಗೆ ಸಿಇಓ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಲ್ಯಾರಿ ಪೇಜ್‍ ಅತ್ಯಂತ ಅಪರೂಪವಾದ ಗೌರವಕ್ಕೆ ಪಾತ್ರರಾಗಿದ್ದಾರೆ.
 
ಫೋರ್ಬ್ಸ್ ಪ್ರಕಟಿಸಿರುವ ವಿಶ್ವದ ಅತ್ಯಂತ ಜನಪ್ರಿಯ ಸಿಇಓ 2016ರ ಪಟ್ಟಿಯಲ್ಲಿ ಲಾರಿ ಪೇಜ್ ಪ್ರಥಮ ಸ್ಥಾನ ಸಂಪಾದಿಸಿದ್ದಾರೆ. ಮುಂದಿನ ಸ್ಥಾನದಲ್ಲಿ ಫೇಸ್‌ಬುಕ್ ಸೃಷ್ಟಿಕರ್ತ ಮಾರ್ಕ್ ಜುಕರ್ ಬರ್ಗ್ ಇದ್ದಾರೆ. 
 
ಆ ಬಳಿಕದ ಸ್ಥಾನಗಳಲ್ಲಿ ಆನ್‌ಲೈನ್ ಶಾಪಿಂಗ್ ರೀಟೈಲರ್‌ ಆಗಿ ಹೆಸರು ಮಾಡಿರುವ ಅಮೆಜಾನ್ ಸ್ಥಾಪಕ, ಸಿಇಓ ಜೆಫ್ ಬೆಜೋಸ್ ಮೂರನೇ ಸ್ಥಾನದದಲ್ಲಿದ್ದಾರೆ. ವಿಶ್ವವಿಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ನಾಲ್ಕನೇ ಸ್ಥಾನ. ಆನಂತರದ ಸ್ಥಾನದಲ್ಲಿ ಜೆಪಿ ಮಾರ್ಗನ್ ಚೇಸ್ ಸಿಇಓ, ಮುಖ್ಯಸ್ಥ ಜಾಮಿ ಡಿಮೋನ್ ಇದ್ದಾರೆ.
 
ಟೆಸ್ಲಾ ಮುಖ್ಯಸ್ಥ ಮಸ್ಕ್ ಆರನೇ ಸ್ಥಾನದಲ್ಲಿದ್ದರೆ, ಆ ಬಳಿಕ ಊಬರ್ ಸಿಇಓ ಟ್ರಾವಿಸ್ ಕಲಾನಿಕ್, ಜನರಲ್ ಮೋಟಾರ್ಸ್ ಮುಖ್ಯಸ್ಥ ಮೇರಿ ಬರ್ರಾ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಸಿಇಓಗಳು.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಲರಿಕಲ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ - ತರಬೇತಿ