ಹೀರೋ ಮೋಟರ್ ಕಾರ್ಪ್ ಕಂಪೆನಿ ತನ್ನ 125 ಸಿಸಿ ಗ್ಲಾಮರ್ ಬೈಕನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದನ್ನು ಅರ್ಜೆಂಟೈನಾ ರಾಜಧಾನ್ನಿ ಬ್ಯೂನಸ್ ಐರಿಸ್‍ನಲ್ಲಿ ಅನಾವರಣ ಮಾಡುವ ಮೂಲಕ, ಮಾರುಕಟ್ಟೆಗೆ ರಿಲೀಸ್ ಮಾಡಲಾಗಿದೆ.
ಭಾರತದ ಒಳಗಿನ ಕಂಪೆನಿ ಬಿಡುಗಡೆ ಮಾಡಿದ ಮೊದಲ ಬೈಕ್ ಇದೇ ಆಗಿರುವುದು ವಿಶೇಷ. ಈ ವರ್ಷ ಮಾರ್ಚ್‌ನಲ್ಲಿ ಹೊಸ ಗ್ಲಾಮರ್ ಭಾರತದ ರಸ್ತೆಗೆ ಇಳಿಯಲಿದೆ. ಸದ್ಯಕ್ಕೆ ಇರುವ ಗ್ಲಾಮರ್ ಆವೃತ್ತಿಯನ್ನು ಇದು ತುಂಬಲಿದೆ. ಪ್ರಪಂಚದಾದ್ಯಂತ ಯುವ ಬಳಕೆದಾರರಿಗಾಗಿ ಬಿಎಸ್ 4 ನಿಯಮಗಳಡಿ 125 ಸಿಸಿ ಹೊಸ ಗ್ಲಾಮರ್ ತಯಾರಿಸಿರುವುದಾಗಿ ಕಂಪೆನಿ ತಿಳಿಸಿದೆ.
ಅರ್ಜೆಂಟೀನಾದಲ್ಲಿ ವಾಹನಗಳ ಪ್ರಚಾರಕ್ಕಾಗಿ ಈಗಾಗಲೆ ಪ್ರಮುಖ ಫುಟ್‍ಬಾಲ್ ಪಟು ಅಧ್ಲೆಟಿಕೋ ಡಿ ಮಾಡ್ರಿಡ್ ಕೋಚ್ ಡಿಗೋ ಸಿಮೋನ್‌ರನ್ನು ಕಂಪನಿ ನೇಮಿಸಿದೆ. ಅರ್ಜೆಂಟೀನಾ, ಲ್ಯಾಟಿನ್ ಅಮೆರಿಕ ಬಹಳ ಮುಖ್ಯವಾದ ಮಾರುಕಟ್ಟೆಗಳು ಎಂದು ಹಿರೋ ಮೋಟಾರ್ ಕಾರ್ಪ್ ಎಂಡಿ, ಸಿಇಓ ಪವನ್ ಮುಂಜಾಲ್ ಹೇಳಿದ್ದಾರೆ. ಬ್ಯೂನಸ್ ಐರಿಸ್‌ನಲ್ಲಿ ತಯಾರಿ ಘಟಕ ಆರಂಭಿಸಿರುವುದಾಗಿಯೂ ಹೇಳಿದ್ದಾರೆ. ಇದರ ವಾರ್ಷಿಕ ಸಾಮರ್ಥ್ಯ 5,000 ಬೈಕ್‌ಗಳು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.