Select Your Language

Notifications

webdunia
webdunia
webdunia
webdunia

ಏರ್‌ಟೆಲ್‌ನಿಂದ 259 ರೂ.ಗಳಿಗೆ 10 ಜಿಬಿ ಡೇಟಾ ಆಫರ್

ಏರ್‌ಟೆಲ್‌ನಿಂದ 259 ರೂ.ಗಳಿಗೆ 10 ಜಿಬಿ ಡೇಟಾ ಆಫರ್
ನವದೆಹಲಿ , ಬುಧವಾರ, 19 ಅಕ್ಟೋಬರ್ 2016 (17:26 IST)
ದೇಶದ ಬೃಹತ್ ಟೆಲಿಕಾಂ ಕಂಪೆನಿಯಾದ ಏರ್‌ಟೆಲ್, ಹೊಸತಾಗಿ 4ಜಿ ಮೊಬೈಲ್ ಹ್ಯಾಂಡ್‌ಸೆಟ್ ಖರೀದಿಸುವ ಗ್ರಾಹಕರಿಗಾಗಿ ಹೊಸತೊಂದು ವಿಶೇಷ ಆಫರ್ ಘೋಷಿಸಿದೆ. 
 
4ಜಿ ಮೊಬೈಲ್ ಹ್ಯಾಂಡ್‌ಸೆಟ್ ಖರೀದಿಸುವ ಗ್ರಾಹಕರು 259 ರೂ.ರಿಚಾರ್ಜ್ ಮಾಡಿಸಿದಲ್ಲಿ 10 ಜಿಬಿ(4G/3G) ಡೇಟಾ ನೀಡಲಾಗುತ್ತದೆ. 1 ಜಿಬಿ ಡೇಟಾ ನೇರವಾಗಿ ಖಾತೆಗೆ ವರ್ಗವಾಗಲಿದ್ದು, ಉಳಿದ 9 ಜಿಬಿ ಡೇಟಾವನ್ನು ಮೈ ಏರ್‌ಟೆಲ್ ಆಪ್ ಮೂಲಕ ಪಡೆಯಬಹುದಾಗಿದೆ. ಡೇಟಾವನ್ನು 28 ದಿನಗಳವರೆಗೆ ಬಳಸಬಹುದಾಗಿದೆ. ಗ್ರಾಹಕರು ಆಫರ್ ಅಡಿಯಲ್ಲಿ 90 ದಿನಗಳೊಳಗೆ ಮೂರು ಬಾರಿ ರಿಚಾರ್ಜ್ ಮಾಡಬಹುದಾಗಿದೆ.  
 
ಕಳೆದ ವಾರ ಗುಜರಾತ್, ಮಧ್ಯಪ್ರದೇಶ ಮತ್ತು ಚತ್ತೀಸ್‌ಗಢ್ ರಾಜ್ಯದಲ್ಲಿ ಪರಿಚಯಿಸಲಾಗಿದ್ದ ವಿಶೇಷ ಆಫರ್‌ನ್ನು ಏರ್‌ಟೆಲ್ ಕಂಪೆನಿ ಇದೀಗ ದೇಶಾದ್ಯಂತ ವಿಸ್ತರಿಸಿದೆ. 
 
ದೇಶದ 18 ವಲಯಗಳಲ್ಲಿ ಏರ್‌ಟೆಲ್ 4ಜಿ ಲಭ್ಯವಿದ್ದು, ಉಳಿದ ವಲಯಗಳಲ್ಲಿ 3ಜಿ ಡೇಟಾವನ್ನು ಗ್ರಾಹಕರು ಪಡೆಯಬಹುದಾಗಿದೆ ಎಂದು ಏರ್‌ಟೆಲ್ ಕಂಪೆನಿ ತಿಳಿಸಿದೆ. 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಕಾವೇರಿ ವಿಚಾರದಲ್ಲಿ ರಾಜ್ಯ ಸರಕಾರ ಚೆಲ್ಲಾಟ: ಕುಮಾರಸ್ವಾಮಿ ವಾಗ್ದಾಳಿ