Select Your Language

Notifications

webdunia
webdunia
webdunia
webdunia

ರೂ.1099ಕ್ಕೆ ಏರ್‌ಏಷ್ಯಾ ವಿಮಾನ ಟಿಕೆಟ್

ರೂ.1099ಕ್ಕೆ ಏರ್‌ಏಷ್ಯಾ ವಿಮಾನ ಟಿಕೆಟ್
New Delhi , ಶನಿವಾರ, 18 ಫೆಬ್ರವರಿ 2017 (21:01 IST)
ವಿಮಾನ ಪ್ರಯಾಣಿಕರಿಗಾಗಿ ಪ್ರಮುಖ ವಿಮಾನಯಾನ ಸಂಸ್ಥೆ ಏರ್‌ಏಷ್ಯಾ ಇಂಡಿಯಾ ಹೊಸ ಆಫರನ್ನು ಪ್ರಕಟಿಸಿದೆ. ರೂ.1,099ಕ್ಕೆ ವಿಮಾನ ಟಿಕೆಟ್ ಕೊಡುತ್ತಿರುವುದಾಗಿ ಹೇಳಿದೆ. ಫೆಬ್ರವರಿ 19ರವರೆಗೂ ಈ ಕೊಡುಗೆ ಲಭ್ಯವಾಗಲಿದೆ.
 
ಫೆಬ್ರವರಿಯಿಂದ ಏಪ್ರಿಲ್ 30, 2017ರ ನಡುವೆ ಪ್ರಯಾಣಿಸುವವರಿಗೆ ಈ ಆಫರ್ ಅನ್ವಯಿಸಲಿದೆ. ಗುವಾಹಟಿ-ಇಂಫಾಲ್ ನಡುವಿನ ಪ್ರಯಾಣಿಸುವವರಿಗೆ ಮಾತ್ರ ರೂ.1,099ಕ್ಕೆ ಟಿಕೆಟ್ ಬೆಲೆ ನಿಗದಿ ಮಾಡಿದೆ.
 
ಕೊಚ್ಚಿ-ಬೆಂಗಳೂರು, ಬೆಂಗಳೂರು-ಹೈದರಾಬಾದ್ ನಡುವೆ ರೂ.1,449, ಗೋವಾ-ಬೆಂಗಳೂರು ರೂ.1,599, ವಿಶಾಖಪಟ್ಟಣ-ಬೆಂಗಳೂರು ರೂ.1,699ಕ್ಕೆ ಟಿಕೆಟ್ ಬೆಲೆ ನಿಗದಿಪಡಿಸಿದೆ. ಆದರೆ ಎಷ್ಟು ಟಿಕೆಟ್‌ಗಳನ್ನು ನೀಡುತ್ತಿದೆ ಎಂದು ಕಂಪೆನಿ ಪ್ರಕಟಿಸಿಲ್ಲ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್ಎನ್‍ಎಲ್‍ನಿಂದ ಉಚಿತ ಸಿಮ್ ಆಫರ್